ಸಹೋದರಿಯರೇ ನೋವಿದೆ
ಬಲುವಾಗಿ ಹೆಮ್ಮೆಯ ಹೆಮ್ಮರದ ನಡುವೆ
ಅಲ್ಪವಷ್ಟೆ
ನವಲೋಕದ ಗುಂಗಿನಲ್ಲಿ
ಧರ್ಮಾಚಾರವನ್ನು ಎಲ್ಲೆಂದರಲ್ಲಿ ಹೊಸಕಿಹಾಕುವ
ನಿಮ್ಮಂತಿರದ ಇತರರ ನಡುವೆ
ಬಸವಳಿಯದೆ ದಣಿವರಿಯದೇ
ಅಭಿಮಾನವ ಕಾಯುತ್ತಿದ್ದೀರಿ
ಹೆಗಲಮೇಲೆ ಭವಿಷ್ಯದ ಭಾರವು
ದೊಪ್ಪನೆ ನೆಲದೂಡುತ್ತಿದ್ದರೂ
ಅಂಜದಾದಿರಿ
ನೆಕ್ಕುವ ಬಯಸಿದ್ದನ್ನು ಕಂಡಕಂಡೆಡೆ
ಗೀಚುವ ವಿಕಾರಿಗಳ ನಡುವೆ
ಹಿಂಸೆಯ ಮೂರ್ತರೂಪಗಳ ನಡುವೆ
ತಾರತಮ್ಯದ ಕೇಕಿಸುವ ಪಾಪಿಗಳ ನಡುವೆ
ಎತ್ತರೇರುವ ಮೆಟ್ಟಿಲ ವಿದ್ಯಾಲಯವಾಗಿಸಿ
ಅಕ್ಷರವನ್ನು ಜೋಪಾನವಾಗಿರಿಸಿದಿರಿ
ಮೆಟ್ಟಿಲ ಬುಡದಲ್ಲಿರುವಿರಿ ನಾ ಕಂಡಂತೆ
ನಿಮ್ಮೆದುರು ಏರುವ ದಾರಿಯೂ ಕಾಣುತ್ತಿದೆ
ಏರಿಬಿಡುವಿರಿ ತನ್ನತನ ಬಿಕರಿಯಾಗಿಸದ
ದೃಢತೆಯ ಪ್ರತಿಫಲವಾಗಿ
ದಿನವುರುಳಲಿ ಘಳಿಗೆಗಳುರುಳಲಿ
ಆದರೆ ದೃಢತೆ ದೃಢವಾಗಿರಲಿ ಉರುಳದಂತೆ
ಕಾಪಿದ್ದು ಕ್ಷಣಿಕವಾದುದನ್ನಲ್ಲವಲ್ಲ
ಶಾಶ್ವತ ಹಿರಿಮೆಯ ಆದಿಯ ಕೊಂಡಿಯದು
ಸಹೋದರಿಯರೇ ದೃಢವಾಗಿರಲಿ
📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು