📝 ಬರಹ: ಯಾಸೀನ್ ಬಂಗೇರಕಟ್ಟೆ
ಬರಹಗಾರರು, ಪತ್ರಿಕೋದ್ಯಮ ವಿದ್ಯಾರ್ಥಿ.
ದೇಶ ಬದಲಾಗಿದೆ, ಕೋವಿಡ್ ವ್ಯಾಪಕವಾಗಿ ಪಸರಿಸುತ್ತಿದೆ. ಪುಸ್ತಕ ಓದುವವರು ಇಂದು ವಿಡಿಯೋ ಗೇಮ್ ಆಡೋದರಲ್ಲಿ ಬ್ಯೂಸಿಯಾಗಿದ್ದಾರೆ. ಅದರಲ್ಲೂ ಮೊಬೈಲ್ ನಲ್ಲಿ ಇರುವಂತಹ ಕೆಲವೊಂದು ವಿಡಿಯೋ ಗೇಮ್ ಮನುಷ್ಯನ ಜೀವಕ್ಕೆ ಬಹಳಷ್ಟು ನಷ್ಟವನ್ನು ಉಂಟುಮಾಡುತ್ತದೆ. ಅತಿವೇಗವಾಗಿ ಮಕ್ಕಳನ್ನು, ಯುವಕರನ್ನು ಆ ಗೇಮ್ ಗಳು
ಮನವೊಲಿಸುತ್ತದೆ. ಈ ಗೇಮ್ ಗಳಿಂದ ಭವಿಷ್ಯ ರೂಪಿಸಿಬೇಕಾದ ವಿದ್ಯಾರ್ಥಿಗಳು ಜೀವ ಕಳೆದುಕೊಂಡ ಸಂಖ್ಯೆಗಳು ಒಂದಲ್ಲ-ಎರಡಲ್ಲ…!
ಈ ವಿಡಿಯೋಗೇಮ್ ಯಾವ ರೀತಿಯಲ್ಲಿ ಮಕ್ಕಳನ್ನು ಮೆಚ್ಚುವಂತೆ ಮಾಡುತ್ತದೆಯೆಂದರೆ, ತನ್ನ ಆತ್ಮೀಯ ಗೆಳೆಯನಿಗಿಂತ ಅತೀ ವೇಗವಾಗಿ ಇಷ್ಟವಾಗಿ ಬಿಡುತ್ತದೆ. ಒಮ್ಮೆ ಈ ವಿಡೀಯೋ ಗೇಮ್ ಆಡಿದರೆ ಮತ್ತೇ ಮತ್ತೇ ಆಡಬೇಕೆಂಬ ಆಸೆಗಳು ಉಂಟುಮಾಡುವ ರೀತಿಯಲ್ಲಿ ಹೊಸ- ಹೊಸ ಅನುಭವಗಳನ್ನು ಈ ವಿಡಿಯೋ ಗೇಮ್ ಗಳು ಕೊಡುತ್ತೆ. ಇದರಿಂದ ವಿದ್ಯಾರ್ಥಿಗಳು, ಯುವ ಪೀಳಿಗೆಯು ಅಂತಹ ಗೇಮ್ ಗಳಿಗೆ ತುಂಬಾ ಬೇಗನೆ ಮರುಳಾಗಿ ಬಿಡುತ್ತದೆ. ಈ ವಿಡಿಯೋ ಗೇಮಿನಲ್ಲಿ ಎಷ್ಟು ಸಮಯ ಕಳೆದರೂ ಕೂಡ ಗೊತ್ತಾಗಲ್ಲ, ಅದೂ ರಾತ್ರಿ, ಬೆಳಿಗ್ಗೆ ಸಮಯ ಹೋದದ್ದು ಗೊತ್ತೇ ಆಗಲ್ಲ. ಈ ಗೇಮ್ ಬಗ್ಗೆ ಕೆಲವೊಂದು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಹೌದು ಗೇಮ್ ಅಂದರೆ ಇದು ಒಂಥರಾ ಕ್ರಿಕೆಟ್ ಗೇಮ್ ತರಲ್ಲಾ.. ಇದು ವಿಡಿಯೋಗೇಮ್ ಆಗಿದೆ, ಮೊದಲ ಬಾರಿ “ಬ್ಲೂವೆಲ್ ಗೇಮ್” ಎಂಬ ತ್ರಿಲ್ಲಿಂಗ್ ಗೇಮ್ ಬಂದಿತು. ಈ ಗೇಮ್ 100 ಟಾಸ್ಕ್ ಗಳನ್ನು ಪೂರ್ತಿಮಾಡುವ ಮೂಲಕ ಕೊನೆಗೆ ತನ್ನ ಜೀವವನ್ನು ತ್ಯಾಗ ಮಾಡಿದರೆ ಆ ಗೇಮಲ್ಲಿ ಗೆದ್ದಂಗೆ. ಈ ಗೇಮಲ್ಲಿ ನಾವು ಜೀವ ಕಳೆದ ಲೆಕ್ಕವಿಲ್ಲ, ನಂತರ ಸರ್ಕಾರ ಇದನ್ನು ನಿಷೇಧಿಸುವ ಮೂಲಕ ಬ್ಲೂವೆಲ್ ಗೇಮ್ ಅನ್ನು ಪ್ಲೇ ಸ್ಟೋರ್ ನಿಂದ ಡಿಲೀಟ್ ಮಾಡಲಾಯಿತು.
“ಪಬ್ಜಿ” ಎಂಬ ಮಾರಕ ಗೇಮ್.
ಮತ್ತೆ ಬಂದದ್ದೇ ಪಬ್ಜಿ, ಈ ಗೇಮ್ ಯಾವ ರೀತಿ ಎಂದರೆ ಸುಮಾರು ನೂರು ಮಂದಿಯ ಯುಧ್ಧದಲ್ಲಿ ಎಲ್ಲರನ್ನೂ ಸಾಯಿಸಿ ಉಳಿಯುವವನೇ ಅದರ ವಿಜಯಶಾಲಿ, ಇಲ್ಲಿ ನಾಲ್ಕು ಮಂದಿಯ ತಂಡದ ರೀತಿಯಲ್ಲಿ ಕೂಡ ಆಡುತ್ತಾರೆ. ಇದು ವಿದ್ಯಾರ್ಥಿಗಳಿಗೆ ತುಂಬಾ ಆಕರ್ಷಣೆಯಾಯಿತು.
ಈ ಪಬ್ಜಿ ಗೇಮಿಗೆ ದಿನ ಹೋದಂತೆ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಗೇಮನ್ನು ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರು, ಉದ್ದಿಮೆಯಲ್ಲಿರುವವರು ಕೂಡ ಆಡುತ್ತಾರೆ. ಪಬ್ಜಿ ಗೇಮನ್ನು ತಂದಂತಹ ಬ್ರಿಡನ್ ಗ್ರೀನೇ ದಿನಕ್ಕೆ ಬರೋಬ್ಬರಿ $7.4 ಮಿಲಿಯನ್ ಲಾಭ ಗಳಿಸುತ್ತಿದ್ದಾನೆ.
ಪಬ್ಜಿ ವಿಚಾರದಲ್ಲಿ ನಾವು ಜೀವ ಕಳೆದ ಘಟನೆಗಳು ತುಂಬಾ ಕೇಳಿದ್ದೇವೆ. ಅವುಗಳಲ್ಲಿ ಎರಡು ಘಟನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಕಳೆದ ಕೆಲವು ತಿಂಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಭಾರತಿದಾಸನ್ ನಗರದಲ್ಲಿ ನಡೆದ ಈ ಘಟನೆ ಇದು, ಐಟಿಐ ಪ್ರಥಮ ವರ್ಷ ವಿದ್ಯಾರ್ಥಿ 16 ವರ್ಷದ ರವಿ.ತಾಯಿಯ ಸೀರೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ ಲೈನ್ ತರಗತಿಗಾಗಿ ತಾಯಿ ಜಯಲಕ್ಷ್ಮೀ ಮತ್ತು ಅಣ್ಣ ವಿಶ್ವ ಈತನಿಗೆ ಮೊಬೈಲ್ ಖರೀದಿಸಿ ಕೊಟ್ಟಿದ್ದರು. ಆದರೆ ಈತ ಯಾವಾಗಲೂ ಪಬ್ಜಿ ಆಟದಲ್ಲಿಯೇ ನಿರತನಾಗಿದ್ದ, ಹೀಗೆ ಒಂದು ದಿನ ಪಬ್ಜಿ ಆಟ ಆಡುವಾಗ ಗೆಳೆಯರು ಅವಮಾನ ಮಾಡಿದರು ಎಂದು ನೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರ್ಷದ ಹಿಂದೆಯಷ್ಟೆ ರವಿಯ ತಂದೆ ನಿಧನರಾಗಿದ್ದರು. ಮತ್ತೇ ಪುತ್ರನೂ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಇದು ಒಂದು ಕಡೆಯಾದರೆ ಮತ್ತೊಂದು ದ.ಕ ಜಿಲ್ಲೆಯ ಕೆ,ಸಿ ರೋಡ್ ಎಂಬಲ್ಲಿ ಗೆಳಯನೊಬ್ಬ ಯಾವಾಗಲು ಪಬ್ಜಿಯಲ್ಲಿ ಗೆಲ್ಲುತ್ತಿದ್ದ ಎಂದು ಕೊಂದು ಸಾಯಿಸಿದ್ದಾನೆ.
ಇದು ಎರಡು ಘಟನೆಯಲ್ಲ ಪಬ್ಜಿಯಲ್ಲಿ ಮಾನಸೀಕರಾದವರು ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೂರಾರು ಮಂದಿ ಗೇಮಿನಿಂದ ಇಂತಹ ಸಣ್ಣ- ಪುಟ್ಟ ವಿಷಯಗಳಿಗೆ ಮರಣದ ರುಚಿ ಅನುಭವಿಸಬೇಕಾದ ಸ್ಥಿತಿ ಬಂದಿದೆ. ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾಗಿದೆ. ಇಂತಹ ಗೇಮ್ ಗಳು ನಿಷೇಧಿಸಿದರು, ಬೇರೆ ಬೇರೆ ರೀತಿಯಲ್ಲಿ ಡೌನ್ಲೋಡ್ ಮಾಡಿ ಆಡ್ತಿದ್ದಾರೆ. ಹೆತ್ತ ತಂದೆ-ತಾಯಿಯರು ಮೊಬೈಲ್ ಕೊಡುವಾಗ ಜಾಗರೂಕತೆಯಿಂದ ಇರಿ, ಆನ್ಲೈನ್ ಕ್ಲಾಸ್ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಿ. ಪಬ್ಜಿ ಮುಕ್ತ ನವ ಭಾರತವನ್ನು ನಾವು ಸೃಷ್ಟಿಸೋಣ.