Home ಅಂಕಣಗಳು ಕಾಲವು ಕಾಯುತ್ತಿದೆ ಮರ್ಹೂಮ್ ಮಿತ್ತಬೈಲು ಉಸ್ತಾದರಂತಹ ಮಹಾನುಭಾವರಿಗಾಗಿ.

ಕಾಲವು ಕಾಯುತ್ತಿದೆ ಮರ್ಹೂಮ್ ಮಿತ್ತಬೈಲು ಉಸ್ತಾದರಂತಹ ಮಹಾನುಭಾವರಿಗಾಗಿ.

ಸರಳತೆಯ ಮಹಾ ವಿಸ್ಮಯ ಮರ್ಹೂಮ್ ಮಿತ್ತಬೈಲು ಉಸ್ತಾದ್.ಎರಡು ವರ್ಷಗಳು ಕಳೆದರೂ ಕಾಡುತ್ತಿದೆ ಮಿತ್ತಬೈಲು ಉಸ್ತಾದರ ಅಭಾವ.ಇಂದು ಆ ಮಹಾನುಭಾವರ ಎರಡನೆಯ ಆಂಡ್ ನೇರ್ಚ ಬಹಳ ವಿಜ್ರಂಭನೆಯಿಂದ ನಡೆಯಲಿದೆ.ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ ಗಳೂ ತರಾತರಿಯಲ್ಲಿ ನಡೆಯುತ್ತಿದೆ.ಆದರೆ ನಮ್ಮೊಳಗಿನ ಆ ಕೊರಗು, ಆ ವಿರಹ ದುಃಖ ಇನ್ನೂ ಮಾಸಿ ಹೋಗಿಲ್ಲ.


ಅದು ಶ್ರೀಮಂತ ವರ್ಗದವರಿಗಿಂತ ಸಾಮಾನ್ಯ ಜನರಿಗೆ ಹೆಚ್ವು ಭಾಧಿಸಿದೆ.ಸುದೀರ್ಘವಾಗಿ ದರ್ಸ್ ನಡೆಸಿದ ಮಿತ್ತಬೈಲು ಮಸೀದಿಯ ಎಡಭಾಗದ ನಿರ್ಧಿಷ್ಟ ಜಾಗವನ್ನು ನೋಡಿದರೆ ಇವತ್ತಿಗೂ ಎರಡು ಹನಿ ನೀರು ಕಣ್ಣಲ್ಲಿ ಉದುರದೇ ಇರದು.ಕಾರಣ ಆ ಜಾಗ ಜನಸಾಮಾನ್ಯರ ಆಶಾಕೇಂದ್ರವಾಗಿತ್ತು.ಯಾರಿಗೂ ಹೋಗಿ ಹತ್ತಿರ ಕೂತು ಸಂಕಷ್ಟಗಳನ್ನು ಹೇಳಿಕೊಳ್ಳುವ ಅವಕಾಶ ಅಲ್ಲಿತ್ತು.ಯಾರಿಗೂ ನಿರಾಶೆ ಕಾಡಲೇ ಇಲ್ಲ.ಯಾರನ್ನೂ ಆ ಮಹಾನುಭಾವರು ಕಡೆಗಣಿಸಲಿಲ್ಲ.ಯಾರಿಂದಾದರೂ ಅನುಚಿತ ವರ್ತನೆಯ ನ್ನು ಕಂಡಾಗ ಕೋಪಿಸಿಕೊಂಡು ಚೆನ್ನಾಗಿ ಬುದ್ದಿವಾದ ಹೇಳಿ ಕಳುಹಿಸುತ್ತಿದ್ದರು.ಅಷ್ಟು ಮಾತ್ರಕ್ಕೆ ಎಂತಹಾ ಜನರು ಕೂಡಾ ಅವರ ಸ್ನೇಹ ವರ್ತನೆಯ ಮುಂದೆ ತಲೆದೂಗುತ್ತಿದ್ದರು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

ಇನ್ನು ಉನ್ನತವಾದ ಸ್ಥಾನವು ಅರಸಿ ಬಂದಾಗ ತನಗಿಂತ ಮೊದಲು ಬೇರೆಯವರ ಹೆಸರನ್ನು ಸೂಚಿಸಿ ತಪ್ಪಿಸಿಕೊಳ್ಳುತ್ತಿದ್ದರು.ಅದು ನಿಖಾಹ್ ಅಥವಾ ದುಆ ಕಾರ್ಯವೇ ಇರಲಿ,ಬೇಗನೇ ಹೋಗಿ ನಿರ್ವಹಿಸಲು ಯಾವತ್ತೂ ಸಿದ್ದರಾಗುತ್ತಿರಲಿಲ್ಲ.ಬದಲು ಹಲವು ಬಾರಿ ಒತ್ತಾಯ ಮಾಡಿದರೆ ಎಲ್ಲರೂ ಒಪ್ಪಿಗೆಯಾದರೆ ಮತ್ತು ತನಗೂ ಸರಿ ಎಂದು ಕಂಡರೆ ಮಾತ್ರ ದುಅ ಅಥವಾ ನಿಖಾ ನೆರವೇರಿಸುತ್ತಿದ್ದರು.

ವಿಶೇಷವಾಗಿ ಹೇಳಲೇಬೇಕಾದ ಸಂಗತಿ ತನ್ನ ಸುದೀರ್ಘ ದೀನೀ ಸೇವೆಯ ಅವಧಿಯಲ್ಲಿ ಯಾವುದೇ ಸಂಘರ್ಷ, ಸಮಸ್ಯೆ ಗಳಿಗೆ ಸಿಕ್ಕಿಹಾಕಿಕೊಳ್ಳಲೇ ಇಲ್ಲ.ಯಾರಿಗೂ ಕೂಡಾ ಅವರ ಜೊತೆ ಯಲ್ಲಿ ವೈಮನಸ್ಯ, ಅಥವಾ ಅಸಮಾಧಾನ ಹೇಳಲಿಕ್ಕೆ ಇಲ್ಲವೇ ಇಲ್ಲ.ಯಾರೊಂದಿಗೂ ಅವರು ಪೈಪೋಟಿ ನಡೆಸಿದ ಅಥವಾ ಅವರೊಂದಿಗೆ ಯಾರಾದರೂ ವಾಗ್ವಾದ ಮಾಡಿದ ಅನುಭವವೇ ಇಲ್ಲ. ಅರಿಮಿನ ಅಗಾಧವಾದ ಭಂಡಾರವನ್ನೇ ಹೊತ್ತು ನಡೆದ ಮಾಹಾನುಭಾವರು ಜನಸಾಮಾನ್ಯರೊಂದಿಗೆ ಸರಳವಾಗಿ, ರಮ್ಯವಾಗಿ, ನಯವಾಗಿ ವರ್ತಿಸುವುದರ ಜೊತೆಗೆ ಅವರಿಗೆ ಸ್ನೇಹ ಸಾಗರದ ಅಮೃತ ವನ್ನೇ ಧಾರಾಳವಾಗಿ ಸವಿಯುವಂತೆ ಮಾಡುತ್ತಿದ್ದರು.

ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

Previous articleಮತದಾರರೇ, ನಿಮಗೊಂದು ತತ್‌ಕ್ಷಣದ ಆಯುಧ ಒಲಿದಿದೆ.
Next articleವಿದ್ವತ್ತಿನಿಂದ ಜಗಜಗಿಸಿದ ಜಬ್ಬಾರುಸ್ತಾದರ ವಿದಾಯಕ್ಕೆ ಭರ್ತಿ ಎರಡು ವರ್ಷ

LEAVE A REPLY

Please enter your comment!
Please enter your name here