Home ಅಂಕಣಗಳು ವಿದ್ವತ್ತಿನಿಂದ ಜಗಜಗಿಸಿದ ಜಬ್ಬಾರುಸ್ತಾದರ ವಿದಾಯಕ್ಕೆ ಭರ್ತಿ ಎರಡು ವರ್ಷ

ವಿದ್ವತ್ತಿನಿಂದ ಜಗಜಗಿಸಿದ ಜಬ್ಬಾರುಸ್ತಾದರ ವಿದಾಯಕ್ಕೆ ಭರ್ತಿ ಎರಡು ವರ್ಷ


ಕೇರಳ ,ಕರ್ನಾಟಕ ,ಲಕ್ಷದ್ವೀಪ ಸೇರಿದಂತೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ವಿದ್ವತ್ತಿನ ಮೇರು ಪರ್ವತ,ಶರೀಹತ್ ತರೀಕತ್,ಹಕೀಕತ್ ನ ಸಾಗರದಲ್ಲಿ ಮಿಂದೆದ್ದು ಜನಕೋಟಿಗಳ ಹೃದಯದಲ್ಲಿ ಚಿರಪ್ರತಿಷ್ಟೆ ಪಡೆದು ಬರೋಬ್ಬರಿ ಅರ್ದ ಶತಮಾನದಷ್ಡು ಕಾಲ ಧಾರ್ಮಿಕ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಬಹುಮಾನ್ಯ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಐಹಿಕ ಜಗತ್ತಿನಿಂದ ಶಾಸ್ವತ ವಿದಾಯ ಕೋರಿ ಎರಡು ವರ್ಷ ಆಗುತ್ತಿರುವ ಈ ಸಂಧರ್ಭದಲ್ಲಿ ನಾಡಿನಾದ್ಯಂತ ಅವರ ಮುಹಿಬ್ಬುಗಳು ಮತ್ತೊಮ್ಮೆ ಅವರನ್ನು ಸ್ಮರಿಸುತ್ತಿದ್ದಾರೆ.
ಹಾಗೆ ನೋಡಿದರೆ ಕರಾವಳಿಯ ಜನತೆ ಅವರನ್ನು ನಿತ್ಯ ಸ್ಮರಿಸುತ್ತಿರುವುದು ಕೂಡಾ ಸುಳ್ಳಲ್ಲ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

ಅದಕ್ಕೆ ಕಾರಣವೂ ಇಲ್ಲದ್ದಿಲ್ಲ.
ನಿಜ ಹೇಳುವುದಾದರೆ ಅವರ ವಿದಾಯದ ನಂತರ ಅವರ ಸ್ಥಾನವನ್ನು ತುಂಬುವ ಯಾರೂ ಈ ತನಕ ನಮಗೆ ಲಭಿಸಿಲ್ಲ.
ಜಗತ್ತು ಬಾಹ್ಯವಾಗಿ ಆರ್ಥಿಕ,ಧಾರ್ಮಿಕ,ಶೈಕ್ಷಣಿಕ‌ ಕ್ಷೇತ್ರದಲ್ಲಿ ಎಷ್ಟೇ ಮುಂದುವರಿದರೂ ಎಲ್ಲೊ ಒಂದು ಕಡೆ ಆದ್ಯಾತ್ಮಿಕ‌ತೆಯ ಹಸಿವಿನಿಂದ ಜನ ಹಪಹಪಿಸುತ್ತಿರುವಾಗ ಜಬ್ಬಾರುಸ್ತಾದ್ ರಂತಹ ಮಾಹಾನುಭಾವರ ಸಾನಿದ್ಯ ನಮಗೆ ಬಹಳಷ್ಟು ನೆಮ್ಮದಿಯನ್ನು ನೀಡುತ್ತಿತ್ತು.
ಅವರ ನಂತರ ಸದ್ಯ ಆ ಸ್ಥಾನ ಖಾಲಿಯಾಗಿದ್ದು ಆದಷ್ಟು ಬೇಗ ಅದನ್ನು ಭರ್ತಿ ಮಾಡುವ ಒಬ್ಬ ನಾಯಕರು ಉದಯಿಸಿ ಬರಲಿ ಎಂಬುದೇ ಈಗ ಎಲ್ಲಾರ ಪ್ರಾರ್ಥನೆಯಾಗಿದೆ.


ಈಗ ಎಲ್ಲಾವೂ ಹಣ,ಅಂತಸ್ತು,ವೇಷಭೂಷಣ ಷಡ್ಯಂತ್ರ,ಪಿತೂರಿ,ಲಾಭಿ,ಮೇಲಾಟ,ಹೆಸರು,ಪೋಟೋ, ಗುಣಗಾನ,ಭಟ್ಟಂಗಿತನ,ಸೋಗಲಾಡಿತನ,ಸ್ವಾರ್ಥ,ಕಾಲೆಳೆತ,ನಂಬಿಕೆ ದ್ರೋಹ,ವಚನ ಭ್ರಷ್ಟತೆ,ಅಪಪ್ರಚಾರಗಳಿಂದ ಧಾರ್ಮಿಕ ಕ್ಷೇತ್ರಕೂಡಾ ಕುಲಗೆಟ್ಟು ಹೋಗಿದ್ದು ಪವಿತ್ರವೆಂದು ನಂಬಲಾಗುವ ಧಾರ್ಮಿಕ ಸಂಘ ಸಂಸ್ಥೆಗಳು ಕೂಡಾ ಹಣ,ಸ್ಥಾನ,ಮಾನ ಪಡೆಯಲು ಒಂದು ಗುರಾಣಿಯಾಗಿ ಮಾರ್ಪಟ್ಟ ಈ ಸಂಧರ್ಭದಲ್ಲಿ ಜಬ್ಬಾರ್ ಉಸ್ತಾದರ ಪವಿತ್ರ ಪಾವನ ವಾದ ಆ ಮಾದರಿ ಜೀವನ ನಮ್ಮ ಮುಂದೇ ತೇಲಿ ಬಂದು ಕಣ್ಣು ತೇವ ಗೊಳ್ಳುತ್ತೆ.


ನೂರು ಶೇಖಡ ಪ್ರಾಮಾಣಿಕ ಬದುಕನ್ನು ಸವೆಸಿಸಿದ ಆ ಮಾಹಾನುಭಾವರ ಆ ಜೀವನ ಮೌಲ್ಯದ ತೂಕ ನಮಗೆ ತಿಳಿದು ಕೊಳ್ಳಲು ಅವರ ವಿಯೋಗವೇ ಬೇಕಾಯಿತು.ಸಾಥ್ವಿಕ ಉಲಮಾಗಳಿಗೆ ಇರ ಬೇಕಾದ ಎಲ್ಲಾ ಗುಣಗಳು ಮೇಲೈಸಿದ್ದ ಬಬ್ಬಾರುಸ್ತಾದ್ ಬಡಬಲ್ಲಿದರೆಂಬ ವ್ಯತ್ಯಾಸ ಇಲ್ಲದೇ ಸಮಾಜದ ಎಲ್ಲಾ ಸ್ತರಗಳಲ್ಲಿ ಇರುವವರಿಗೂ ಸಮಾನವಾಗಿ ಪ್ರೀತಿ ಹಂಚಿ ಸೈ ಎನಿಸಿ ಕೊಂಡಿದ್ದರು.


ಸಮಾಜದ ಹಿತಕ್ಕಾಗಿ ಅವರ ಸಲಹೆ ಸೂಚನೆಗಳನ್ನು ಪಡೆದು ಕೊಳ್ಳುತ್ತಿದ್ದ ಈ ಭಾಗದ ಅದೆಷ್ಟೋ ಜಮಾತ್ ಗಳು,ಸಂಘಟನೆಗಳು,ನಾಯಕರು ತಬ್ಬಲಿಯಾಗಿ ಎರಡು ವರ್ಷ ಸಂದಿರುವಾಗ ನಮಗೆಲ್ಲಾ ಅಲ್ಲಾಹನಲ್ಲಿ ಪ್ರಾರ್ಥಿಸಲಿಕ್ಕಿರುವುದು ರಬ್ಬೇ ಆ ಮಹಾನುಬಾವರ ಪ್ರತಿನಿಧಿಯಾಗಿ ಒಬ್ಬ ಸಮರ್ಥ, ನಿಷ್ಕಲಂಕ, ಪ್ರಾಮಾಣಿಕ ನಾಯಕನನ್ನು ನಮಗೆ ನೀಡು ಎಂದಾಗಿದೆ. ಅಲ್ಲಾಹುವೇ ಉಸ್ತಾದರ ಜೊತೆ ನಮ್ಮನ್ನು ನೀನು ಸ್ವರ್ಗದಲ್ಲಿ ಒಂದು ಗೂಡಿಸು…ಆಮೀನ್

Previous articleಕಾಲವು ಕಾಯುತ್ತಿದೆ ಮರ್ಹೂಮ್ ಮಿತ್ತಬೈಲು ಉಸ್ತಾದರಂತಹ ಮಹಾನುಭಾವರಿಗಾಗಿ.
Next articleಮರೆಯಲಾಗದ ಮಿತ್ತಬೈಲಿನ ಮುತ್ತು

LEAVE A REPLY

Please enter your comment!
Please enter your name here