✍ ಫಾಝಿಲ್ ಅಹ್ಮದ್ ಮಲ್ಹರ್ ವಿದ್ಯಾರ್ಥಿ
ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ :ನನ್ನ ಉಮ್ಮತ್ತಿಗೆ ಒಂದು ಕಾಲ ಬರಲಿದೆ ಆಗ ಅವರು ಐದು ಕಾರ್ಯಗಳನ್ನು ಇಷ್ಟಪಡುತ್ತಾರೆ. ಐದು ಕಾರ್ಯಗಳನ್ನು ಮರೆತುಬಿಡುತ್ತಾರೆ.
1.ಜೀವನವನ್ನು ಇಷ್ಟಪಡುತ್ತಾರೆ. ಮರಣವನ್ನು ಮರೆತುಬಿಡುತ್ತಾರೆ.
2.ಸಂಪತ್ತನ್ನು ಇಷ್ಟಪಡುತ್ತಾರೆ. ಪರಲೋಕದ ವಿಚಾರಣೆಯನ್ನು ಮರೆತುಬಿಡುತ್ತಾರೆ.
3.ಐಷಾರಾಮಿ ಬಂಗಲೆಗಳನ್ನು ಇಷ್ಟಪಡುತ್ತಾರೆ. ಖಬರ್ ಜೀವನವನ್ನು ಮರೆಯುತ್ತಾರೆ.
4.ಇಹಲೋಕ ಜೀವನವನ್ನು ಇಷ್ಟಪಡುತ್ತಾರೆ. ಶಾಶ್ವತವಾದ ಪರಲೋಕ ಜೀವನವನ್ನು ಮರೆಯುತ್ತಾರೆ.
5.ಸೃಷ್ಟಿಯನ್ನು ಇಷ್ಟಪಡುತ್ತಾರೆ. ಸರ್ಷ್ಟಿಕರ್ತನನ್ನು ಮರೆತುಬಿಡುತ್ತಾರೆ. (ಮುರಿಕ್ಕಾತುಲ್ ಕುಳೂಬ್ )
ನಮ್ಮ ನೇತಾರರಾದ, ನಾಯಕರಾದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದು ಎಷ್ಟು ಕಟು ಸತ್ಯವಲ್ಲವೇ !! ಆಧುನಿಕ ಕಾಲ ಘಟ್ಟದಲ್ಲಿ ಜನರು ಇದೇ ರೀತಿಯಲ್ಲಿ ಅವಲೋಕಿಸುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
ಒಳಿತನ್ನು ಧಾರಾಳವಾಗಿ ಕಲಿಯಲು ಅಲ್ಲಾಹನು ಭಾಗ್ಯ ನೀಡಲಿ ಆಮೀನ್