📝ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
ಹೊಸ ವರುಷದಲ್ಲಿ ಕೋರೋನ ಇನ್ನೇನು ಕೊನೆಯಾಯಿತು ಎಂದು ಉಸಿರು ಬಿಡುವಷ್ಟರಲ್ಲಿ ಅದು ಹೈಸ್ಪೀಡ್ ಆಗಿ ಪರಿವರ್ತನೆ ಗೊಂಡು ತನ್ನ ಕೇಂದ್ರ ವನ್ನು ಬ್ರಿಟನಿಗೆ ಬದಲಾಯಿಸಿಕೊಂಡು ನಿದ್ದೆಗೆಡಿಸುತ್ತಿದೆ.ಅತಿವೇಗ ಮತ್ತು ಉತ್ತೇಜಕ ವನ್ನು ಇಷ್ಟಪಡುವ ಕಾಲದಲ್ಲಿ ನಾವಿದ್ದೇವೆ.ಟ್ರೈನು, ಟ್ರಕ್ಕು,ಫ್ಲೈಟು.ಕಾರು ಬಸ್ಸು ಬೈಕು ಎಲ್ಲವೂ ವೇಗವಾಗಿ ಓಡಬೇಕು.
ನೆಟ್ ಆಗಲಿ ವೈಫೈ ಆಗಲಿ ಹೈ ಸ್ಪೀಡ್ ಆಗಿರಬೇಕು.ತರಕಾರಿ ಹಣ್ಣು ಹಂಪಲು ವೇಗವಾಗಿ ಬೆಳೆಯಬೇಕು.ಆಡು ಕುರಿ ಕೋಳಿ ಕೂಡಾ ಕಮ್ಮಿಅವಧಿಗೆ ಹೆಚ್ಚು ಮಾಂಸ ಕೊಡಬೇಕು ಹಾಗೇ ಹಸು ಹೆಚ್ಚು ಹೆಚ್ಚು ಹಾಲು ಕೊಡಬೇಕು.ಒಂದು ವ್ಯಾಪಾರವಿರಲಿ ಬೇಗನೆ ಹಣ ಗಳಿಸಬೇಕು.ನೌಕರಿಯಾಗಲಿ ಫಾಸ್ಟಾಗಿ ಹೆಚ್ಚು ಗಳಿಸುವಂತಿರಬೇಕು.
ನಶೆ ಏರಿಸಿಕೊಳ್ಳುವುದು ಕೂಡಾ ಹೆಚ್ಚು ಉತ್ತೇಜಕ ಶಕ್ತಿ ಇರಬೇಕು.ಇದು ಆಧುನಿಕತೆಯ ವರದಾನ.ವಸ್ತುಸ್ಥಿತಿಯು ಹೀಗಿರುವಾಗ ಹೆಚ್ಚು ಸಂಪಾದನೆ ಮತ್ತು ಹೆಚ್ಚು ಸುಖ ಸಂಪತ್ತು ಪಡೆಯಲು ವೇಗ ಮತ್ತು ಉತ್ತೇಜಕ ಪದಾರ್ಥವಾಗಿ ಧರ್ಮದ ಅಮಲು ಮತ್ತು ರಾಜಕೀಯ ಅಮಲು ಬದಲಾಗಿದೆ.ಅವೆರಡೂ ಕೂಡಾ ಒಂದಾಗಿ ವಿಜ್ರಂಭಿಸುವಾಗ ಜನಜೀವನ ನರಕ ಸದೃಶ ವಾಗಿ ಪರಿಣಮಿಸುತ್ತದೆ.ಕೆಲವೇ
ರಾಜಕೀಯ ಸಿದ್ದಾಂತಿಗಳು ತಮ್ಮ ಸ್ವಾರ್ಥ ಅಧಿಕಾರ ಮೋಹಕ್ಕಾಗಿ ಇಡೀ ಮಾನವತೆಯನ್ನು ಬಲಿಕೊಡಲು ಮುಂದಾಗುತ್ತಾರೆ.
ಈ ಭ್ರಮೆಯಿಂದ ಮಾನವತೆಯು ರಕ್ಷಿಸಿಕೊಳ್ಳಬೇಕಾದರೆ ಸ್ವಂತಿಕೆಯನ್ನು ಉಪಯೋಗಿಸಲು ಸಾಧ್ಯವಾಗಬೇಕು.ಉತ್ತಮ ಸಂಸ್ಕಾರವಿರುವ ಸಮಾಜಕ್ಕೆ ಮಾತ್ರ ರಾಜಕೀಯ ಮತ್ತು ಧರ್ಮದ್ವೇಷದ ವಂಚನೆಯಿಂದ ಪಾರಾಗಬಹುದು.ನ್ಯಾಯ, ನೈತಿಕತೆ, ಧೀರತೆ,ಸಹನೆ ಇರುವ ಸಮಾಜ ಕ್ಕೆ ಮಾತ್ರ ಮಾನವತೆಯನ್ನು ಉಳಿಸಿಕೊಳ್ಳಬಹುದು.
ನಾನೊಂದು ಸೌಹಾರ್ದ ಸಮಾವೇಶ ಕ್ಕೆ ಹೋಗಿದ್ದೆ.ಅಲ್ಲಿ ಒಬ್ನರು ಹಿರಿಯ ಹಿಂದು ನಾಗರಿಕರೊಬ್ಬರು ತನ್ನದೇ ಆದ ಶೈಲಿ ಯಲ್ಲಿ ತನ್ನೂರಿನ ಸೌಹಾರ್ದ ಪರಂಪರೆಯನ್ನು ವಿವರಿಸಿದ್ದು ಈಗಲೂ ನನ್ನ ಮನಸ್ಸಿನಲ್ಲಿ ಮಾಸದೇ ಉಳಿದಿದೆ.ಅವರೇನು ದೊಡ್ಡ ಭಾಷಣಗಾರ ಆಗಿರಲಿಲ್ಲ.ಆದರೆ ಅವರ ಮಾತು ಸಾವಿರ ಭಾಷಣಗಾರರಿಗಿಂತ ಮಿಗಿಲಾಗಿತ್ತು.ಅವರು ಅಬ್ಬು ಹಾಜಿ ಎಂಬ ಊರಿನ ಹಿರಿಯ ವ್ಯಕ್ತಿ ಯ ಬಗ್ಗೆ ವಿವರಿಸುತ್ತಾ ಹೇಳುತ್ತಾರೆ,ಸಂಜೆ ಹೊತ್ತಲ್ಲಿ ಮೋರಿ ಬದಿಯಲ್ಲಿ ಕೂರುವುದು ಕೆಲವು ಹುಡುಗರ ವಾಡಿಕೆಯಾಗಿತ್ತು.ಆದರೆ ಹಾಜಿಯಾರು ಆ ದಾರಿಯಲ್ಲಿ ಬಂದರೆ ಆ ಹುಡುಗರು ಯಾವ ಜಾತಿ ನೋಡದೇ ಓಡಿ ಮರೆಯಾಗುತ್ತಿದ್ದರು.ಕಾರಣ ಅವರು ಯಾರನ್ನೂ ಅಲ್ಲಿ ಸುಮ್ಮನೆ ಕೂರಲು ಬಿಡದೇ ಮನೆಗೆ ಕಳುಹಿಸುತ್ತಿದ್ದರು.ಇದರ ಅರ್ಥ ಊರಿನ ಯಾವ ಹುಡುಗರೂ ಕೆಟ್ಟುಹೋಗಬಾರದೆಂಬ ನಿಯ್ಯತ್ತು ಅವರಲ್ಲಿತ್ತು.ಹಾಗೇ ಊರು ಕೂಡಾ ಉಳಿದಿತ್ತು.ಇದುವೇ ಸೌಹಾರ್ದ ತೆಯ ಬೇರು ಎಂದಾಗಿತ್ತು ಅವರ ನಿಲುವು.ಆದರೆ ಇಂದು ಅಂತಹಾ ಅವಸ್ಥೆ ಕಾಣುತ್ತಿಲ್ಲ.
ವರದಿ ಎ ಆರ್ ತುಂಬೆ