Home ಅಂಕಣಗಳು ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ ಒಂದು

ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ ಒಂದು

📝ಅಬ್ದುಲ್ ಅಝೀಝ್ ಕೊಯ್ಯೂರು

ನಾವು ಇದ್ದಂತೆ ಇಲ್ಲವಾಗುತ್ತಿದ್ದೇವೆ. ನಮ್ಮ ಅಸ್ತಿತ್ವ ಮತ್ತು ನಮಗೆ ಸಹಜವಾಗಿ ದಕ್ಕಿದ ಹಕ್ಕುಗಳಿಂದ ವಂಚಿತರಾಗುತ್ತಿದ್ದೇವೆ. ನಮ್ಮ ಹೋರಾಟಗಳಲ್ಲಿ ನಮ್ಮೆಡೆಯಲ್ಲಿ ವಾಸಿಸುವ ಇತರ ಜನವಾಸಿಗಳಂತೆ ಸಮಾನ ಧ್ಯೇಯವಾಗಿದ್ದರೂ ಇಸ್ಲಾಂ ಧರ್ಮ ಕಲಿಸಿದ ಸಂಸ್ಕೃತಿಯಲ್ಲಿ ಬೆರೆತು ಅಥವಾ ಚಾಚೂ ತಪ್ಪದ ಪಾಲನೆಗಾಗಿ ಸಹಧರ್ಮರೆಮೆಡೆಯಲ್ಲಿ ಅನ್ಯರಾಗುತ್ತಿರುವ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಇಲ್ಲಿ ಇತರರನ್ನು ಇಕ್ಕಟ್ಟಿಗೆ ಸಿಲುಕಿಸಿದ ಅಥವಾ ಸಿಲುಕಿಸುವ ಯಾವುದೇ ಬೆಳವಣಿಗೆ ಈ ಸಂಸ್ಕೃತಿಯಲ್ಲಿ ಬೆರೆತು ಬಂದ ವಿಶ್ವಾಸಿಗಳಲ್ಲಿ ಗೋಚರವಾಗಿಲ್ಲವಾದರೂ ಸದಾ ತುಳಿದು ಬಿಡುವ ಈ ನಡೆಯು ಇಂದು ನಿನ್ನೆಯದ್ದಲ್ಲ ಎನ್ನುವುದನ್ನು ನಾವು ಮರೆಯಬಾರದು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಭಾರತದ ಮಣ್ಣಿನಲ್ಲಿ ಇಸ್ಲಾಂ ನೆಲೆಗೊಂಡು ಸಾವಿರ ವರ್ಷಗಳು ಕಳೆಯುತ್ತಿದ್ದರೂ ಇಲ್ಲಿನ ಮಣ್ಣಿಗಾಗಲಿ ಇಲ್ಲಿ ಆದಿ ಕಾಲದಲ್ಲೇ ಇದ್ದ ಭಿನ್ನ ಸಂಸ್ಕೃತಿಗಾಗಲಿ ಇಸ್ಲಾಂನಿಂದ ಯಾವುದೇ ತೊಡಕಾಗಿರಲಿಲ್ಲ. ಇಲ್ಲಿನ ಆಚಾರ ವಿಚಾರ ಸಂಪ್ರದಾಯಗಳ ಜೊತೆ ಮತ್ತು ಅದನ್ನು ನಂಬಿಕೊಂಡು ಆಚರಿಸುತ್ತಿದ್ದ ಜನರೆಡೆಯಲ್ಲಿ ಇಸ್ಲಾಂನ ಅಲೆಯು ಬೀಸಿದಾಗ ಅದರ ಕೈ ಹಿಡಿದು ಮೇಲೆ ಬಂದವರು ಯಾವುದೇ ಬಲಾತ್ಕಾರದಿಂದಲೋ ಆಯುಧದಿಂದಲೋ ಬಂದವರಲ್ಲ. ನಿಜವಾದ ಮತ್ತು ತಾನು ಆಚರಿಸುವ ಪಧ್ಧತಿಗಳಲ್ಲೆಲ್ಲಾ ಅಷ್ಟೇ ಬಲವಾದ ವ್ಯಕ್ತತೆಯನ್ನು ಹೊಂದಿರುವ ಇಸ್ಲಾಂಮಿಗೆ ಯಾರನ್ನೂ ಬಲವಂತಪಡಿಸಿ ಸತ್ಯದ ಹಾದಿಯನ್ನು ತೋರಿಸುವ ಅಗತ್ಯವಿರಲಿಲ್ಲ. ಮೇಲ್ವರ್ಗದ, ಉಳ್ಳವರ, ಜಾತಿಪಧ್ಧತಿಗಳ ವಿಭಾಗಿಸಿ (Fractionate) ಕಾಣುವ ದರ್ಪದ ಎಲ್ಲೆಗಳು ಸಹಜವಾಗಿಯೇ ಕೆಳವರ್ಗದ ಜನರಲ್ಲಿ ಬದಲಾವಣೆಯ ಅಥವಾ ಸ್ವತಂತ್ರ ನೆಲೆಗಳನ್ನು ಕಂಡುಕೊಳ್ಳುವಂತೆ ಮಾಡಲು ಪ್ರೇರೇಪಿಸಿತು. ಆದ್ದರಿಂದಲೇ ತನ್ನೊಳಗಿನ ಸರ್ವರನ್ನೂ ಸಮಾನರಂತೆ ಕಾಣುವ ಮತ್ತು ಅದಕ್ಕಾಗಿಯೇ ಪ್ರೋತ್ಸಾಹಿಸುವ ಇಸ್ಲಾಂನ ಆಶಯಗಳು ಅವರ ಆಯ್ಕೆಯಾಗಿ ಕಂಡು ಅದರತ್ತ ಜನರು ವಾಲತೊಡಗಿದರು. ಬಳಿಕ ನಡೆದಿದ್ದು ಇತಿಹಾಸವಾಗಿ ನಮ್ಮ ಮುಂದಿದೆ.


ಈ ಬೆಳವಣಿಗೆಯಿಂದ ರೋಸಿ ಹೋದ ಬಹುಸಂಖ್ಯಾತರಾಗಿದ್ದ ಮೇಲ್ಜಾತಿಯ ಮಂದಿ ಅಸೂಯೆಯಿಂದ ಇಸ್ಲಾಂ ಧರ್ಮದ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಲಾರಂಭಿಸಿದರು. ಆದರೆ ಅವರ ಆರೋಪಗಳಲ್ಲಿ ಯಾವುದೇ ಹುರುಳಿರಲಿಲ್ಲ. ಅನ್ಯ ಜಾತಿಯ ಯಾವುದೇ ಹಕ್ಕುಗಳನ್ನು ಭಾರತದ ಮಣ್ಣನ್ನು ಆಳ್ವಿಕೆ ಮಾಡಿದ ಯಾವುದೇ ರಾಜರು ಅತಿಕ್ರಮಣ ಮಾಡಿದ್ದಿಲ್ಲ. ಬಲವಂತದ ಮತಾಂತರವಾಗಲಿ ಅನ್ಯಧರ್ಮೀಯರಿಗೆ ಉಸಿರು ಕಟ್ಟುವಂತಹ ವಾತಾವರಣವಾಗಲಿ ಇಲ್ಲಿನ ಮುಸ್ಲಿಂ ರಾಜರು ನಿರ್ಮಾಣ ಮಾಡಲಿಲ್ಲ. ಅದರ ನಿಜಾಂಶವನ್ನು ನಾವೀಗಲೇ ಭಾರತದ ಜನಸಂಖ್ಯೆಯ ಆಧಾರದಿಂದ ಕಂಡುಕೊಳ್ಳಬಹುದು. ಸರಿಸುಮಾರು 800 ವರ್ಷಗಳಲ್ಲಿ ಭಾರತವನ್ನಾಳಿದ ಘೋರಿ, ಘಜ್ನಿ, ತುಘ್ಲಕ್, ಮೊಗಲ್ ಮೊದಲಾದ ಸಾಮ್ರಾಟರು ತಮ್ಮ ಅಧಿಕಾರವಧಿಯಲ್ಲಿ ಇಡೀ ಭಾರತವನ್ನೇ ತನ್ನ ಕೈಯೊಳಗಿರಿಸಿಕೊಂಡಿದ್ದರೂ ಈಗಲೂ ಭಾರತದ ಜನಸಂಖ್ಯೆಯಲ್ಲಿ ಸಿಂಹಪಾಲು ಮುಸ್ಲಿಮೇತರ ಧರ್ಮಗಳದ್ದೇ ಆಗಿದೆ. ಆದಾಗ್ಯೂ ಈಗ ಹೆಚ್ಚುತ್ತಿರುವ ವಿಭಾಗೀಯತೆ ಇಸ್ಲಾಂನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ವೈಷಮ್ಯದಿಂದ ಬೊಬ್ಬಿರಿಯುವ ವಿಷಜಂತುಗಳು ಬಿತ್ತುವ ಅಥವಾ ಪ್ರಚುರಪಡಿಸುತ್ತಿರುವ ವಾದಗಳೆಲ್ಲಾ ಗೌಣವಾಗಿದ್ದಲ್ಲದೇ ಮತ್ತೇನೂ ಅಲ್ಲ.


ಆದರೆ ಇಸ್ಲಾಂನ ಆರಂಭದ ದಿನಗಳಲ್ಲಿಯೂ ಈ ಆರೋಪಗಳಿಗೇನೂ ಬರವಿರಲಿಲ್ಲ. ಬರಬರುತ್ತಾ ಈ ಆರೋಪಗಳೆಲ್ಲಾ ಪರ್ವತಮುಖಿಯಾಗಿ ಬೆಳೆಯುತ್ತಿದೆ. ಇಸ್ಲಾಂ ನ ನೆಲೆ, ಸಿಧ್ಧಾಂತ, ಸಂಸ್ಕೃತಿ ವಿನಾಕಾರಣ ಅನಗತ್ಯ ಚರ್ಚೆಗೊಳಗಾಗುತ್ತಿದ್ದು ನಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸುವ ಕುತಂತ್ರದ ಹಲವಾರು ಉದಾಹರಣೆಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಕಣ್ಣಿಗೂ ಕಾಣುವಷ್ಟು ಸಂಸ್ಕೃತಿಯ ಚಿಹ್ನೆಗಳು ಹಸಿರಾಗಿದ್ದರೂ ಅವುಗಳನ್ನೆಲ್ಲಾ ಹೈಜಾಕ್ ಮಾಡುತ್ತಿರುವ ಪ್ರಸಂಗಗಳು ಕೂಡಾ ಒಂದೆರಡಲ್ಲ. ಪ್ರತ್ಯೇಕವಾಗಿ ಭಾರತ ದೇಶದಲ್ಲಿ ನಮ್ಮ ಅಸ್ತಿತ್ವದ ಗುರುತು ಯಾರೂ ಮಾಯಿಸದ ಕಲ್ಲಿನ ಕೆತ್ತನೆಗಳಂತೆ ಎಂದೆಂದಿಗೂ ಇರುವಂಥದ್ದೇ.
ಇದನ್ನೂ ಓದಿಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ 2

Previous articleಒಂದು ರಾಜಕೀಯ ಪಾಠ
Next articleಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ 2

LEAVE A REPLY

Please enter your comment!
Please enter your name here