Home ಅಂಕಣಗಳು ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ 2

ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ 2

📝ಅಬ್ದುಲ್ ಅಝೀಝ್ ಕೊಯ್ಯೂರು
ಇದನ್ನೂ ಓದಿ➤ಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ ಒಂದು

ಇಲ್ಲಿನ ಪೂರ್ವಗ್ರಹಪೀಡಿತ ಇತಿಹಾಸಕಾರರು ದಾಖಲಿಸಿದ ತಿರುಚಿದ ಅಥವಾ ಮನಬಂದಂತೆ ಗೀಚಿದ ಇತಿಹಾಸವನ್ನು ಆ ಮನಸ್ಥಿತಿಯನ್ನೇ ಹೊಂದಿರುವ ಇಲ್ಲಿನ ಕೆಲವು ವರ್ಗ ಪ್ರಚುರಪಡಿಸುತ್ತಿದೆ. ಇತಿಹಾಸವನ್ನು ನಿರ್ಲಜ್ಜವಾಗಿ,‌ ತಿರುವು-ಮುರುವು ಮಾಡಿ ಅಧ್ಯಾಪಕರಿಂದ ನಮ್ಮ ಮಕ್ಕಳಿಗೆ ಗುಟುಕು ಕುಡಿಸಲಾಗುತ್ತಿದೆ. ಚರಿತ್ರೆಯನ್ನು ಸುಳ್ಳಾಗಿ ಪ್ರತಿಪಾದಿಸುವುದು ಹಳೆಯ ಕಾಲದಿಂದಲೂ ನಡೆದು ಬರುತ್ತಿದೆ. ಶಾಲೆಗಳಲ್ಲಿ ನಮ್ಮ ಮಕ್ಕಳು ಇದನ್ನೇ ನೈಜ ಇತಿಹಾಸದಂತೆ ಮನನ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಗಳಾಗಿವೆ. ಜೀವನ ಸುಧಾರಣೆಯಲ್ಲಿ ಮುಸ್ಲಿಮರು ವಹಿಸಿದ ಪಾತ್ರ, ಕೈಗಾರಿಕೆಗಳ ಅಭಿವೃಧ್ಧಿಗೆ ಮುಸ್ಲಿಮರ ಕೊಡುಗೆ, ಸಾಂಸ್ಕೃತಿಕ ಬೆಳವಣಿಗೆಗೆ ಪ್ರೋತ್ಸಾಹ, ಸಂಪತ್ತು ವೃಧ್ಧಿಗೆ ಬೇಕಾದ ಕೊಡುಗೆಗಳು, ರಾಜರ ಕಾಲಗಳಲ್ಲಿ ದಾಖಲಿಸಿದ ಜಿ.ಡಿ.ಪಿ ದರ (Gross Domestic Product), ಸರ್ವಜನಾಂಗಗಳಲ್ಲೂ ಸಹಿಷ್ಣುತೆಯ ಪ್ರತಿಪಾದನೆ ಮೊದಲಾದ ಎಲ್ಲಾ ಕ್ಷೇತ್ರದಲ್ಲೂ ಮುಸ್ಲಿಮರ ಪ್ರಾತಿನಿದ್ಯ ನಿರಾಕರಿಸಲಾರದ ವಿಷಯಗಳಾಗಿವೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಮುಂದುವರಿದು ಆಧುನಿಕ ಭಾರತದಲ್ಲಿ ಬ್ರಿಟೀಷರ ಗುಲಾಮಗಿರಿ ಆಡಳಿತದ ಮುಕ್ತಿಗಾಗಿ ನಡೆದ ಸ್ವಾತಂತ್ರ್ಯ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರವೂ ಸಹ ಇತಿಹಾಸದ ದಾಖಲೆಗಳಲ್ಲಿ ಮರೆಯಾಗುತ್ತಿವೆ. ಇತ್ತೀಚಿನ ಕೆಲ ಬೆಳವಣಿಗೆಗಳಲ್ಲಿ ಇತಿಹಾಸವನ್ನು ತಿರುಚಿ ಶಾಲಾ ಪಠ್ಯಗಳನ್ನು ನೂತನವಾಗಿ ರೂಪಿಸುವ ಕಾರ್ಯಕ್ಕೆ ಸ್ವತಃ ಸರ್ಕಾರಗಳೇ ನಾ ಮುಂದು ತಾ ಮುಂದು ಎನ್ನುತ್ತಾ ಪೈಪೋಟಿಗಿಳಿಯುತ್ತಿವೆ. ಮುಸ್ಲಿಂ ಹೆಸರಿರುವ ನಗರಗಳೂ ಕೂಡಾ ಕೋಮು ವೈರಾಗ್ಯದ ಅಲೆಗೆ ಸಿಕ್ಕು ನೇಪಥ್ಯಕ್ಕೆ ಸರಿಯುತ್ತಿವೆ.


ಈ ಎಲ್ಲಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಅಸ್ತಿತ್ವದ ಚಿಹ್ನೆಗಳನ್ನು ಹೆಕ್ಕಿ ತೆಗೆಯಬೇಕಾದ ಕರ್ತವ್ಯ ನಮ್ಮ ಮುಂದಿದೆ. ಭಾರತದಲ್ಲಿ ನಮ್ಮ ಪೂರ್ವಜರಾದ ಮುಸ್ಲಿಂ ರಾಜರು, ಹೆಸರಾಂತ ವ್ಯಕ್ತಿಗಳು, ಸ್ವಾತಂತ್ರ್ಯದ ಬೆಳಕಿಗಾಗಿ ತಮ್ಮ ಜೀವವನ್ನರ್ಪಿಸಿದ ವ್ಯಕ್ತಿಗಳ ಗುರುತುಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಸ್ತುತ ಅವಲೋಕನಕ್ಕೊಳಪಡಿಸಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ.


ಭಾರತದ ನಿರ್ಮಾಣದಲ್ಲಿ ಮುಸ್ಲಿಮರ ಪಾತ್ರವನ್ನು ಹೊರತುಪಡಿಸಿ ಹೇಳಲು ಸಾಧ್ಯವೇ ಇಲ್ಲ. ಅಷ್ಟೊಂದು ವ್ಯಕ್ತತೆಯಿಂದ ಇತಿಹಾಸದ ಪುಟಗಳಲ್ಲಿ ಮುಸ್ಲಿಮರು ಸ್ಥಾನವನ್ನು ಪಡೆದಿದ್ದಾರೆ. ಸಂಪದ್ಭರಿತ ಭಾರತವನ್ನು ಲೂಟಿಗೈದ ಬ್ರಿಟೀಷರಂತೆ ಮುಸ್ಲಿಂ ರಾಜರು ವರ್ತಿಸಲಿಲ್ಲ. ಹಾಗೊಂದು ವೇಳೆ ಕೆಲವು ಸನ್ನಿವೇಶಗಳು ಪ್ರಜೆಗಳಿಗೆ ವಿಪರೀತವಾಗಿ ನಡೆದಿದ್ದರೂ ಅದು ಆ ಸನ್ನಿವೇಶಕ್ಕೆ ಹೊಂದಿಯೋ ಅಥವಾ ಬೇರೆಲ್ಲಾ ಪಂಗಡದ ಅರಸರು ಮಾಡಿದಂತೆ ತಮ್ಮ ಭೂಪ್ರದೇಶದ ಮೇಲಿನ ಆಸೆಯಿಂದ ಎಂಬುದನ್ನು ಮರೆಯಬಾರದು. ಹೇಗಿದ್ದರೂ ಕೋಮುವಿಷ ತುಂಬಿದ ಇತಿಹಾಸ ರಚನೆಕಾರರು ತಾವು ಕಕ್ಕಿದ್ದನ್ನೇ ನೆಕ್ಕುವ ತಮ್ಮ ಸಂತತಿಗಳಿಗೆ ಹೊಂದುವ ಇತಿಹಾಸವನ್ನು ರಚಿಸಿದ್ದಾರೆಂಬುದಕ್ಕೆ ಪೂರಕವಾದ ಹಲವು ಅಂಶಗಳತ್ತ ಪ್ರಾಮಾಣಿಕ ಇತಿಹಾಸಕಾರರು ಬೆಳಕು ಚೆಲ್ಲಿದ್ದಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವ ಕೊರತೆ ನಮ್ಮ‌ಲ್ಲಿ ಕಾಣುತ್ತಿದೆ. ಉತ್ಸಾಹ ಇಮ್ಮಡಿಯಾದರೆ ನಾವು ಈ ಮಣ್ಣಿನಲ್ಲಿ ಅನ್ಯರಲ್ಲ ಎಂಬುದನ್ನು ಎದೆತಟ್ಟಿ ಹೇಳಬಹುದು.

Previous articleಅಸ್ತಿತ್ವ ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ – ಭಾಗ ಒಂದು
Next articleಸುಳ್ಳಾಡಿಕೆಯೊಂದಿಗೆ ದುರ್ಮಾರ್ಗದ ಹಾದಿ ತೋರದಿರಿ

LEAVE A REPLY

Please enter your comment!
Please enter your name here