✒️ಎ.ಎಸ್.ಮಂಡಾಡಿ
ಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ
➖➖➖➖➖➖➖➖➖➖➖
ಶುಭ ಕಾರ್ಯಗಳ ಕುರಿತು ಸುವಾರ್ತೆ ಸಂತೋಷದ ವಿಷಯವೇ ಸರಿ.ಆದರೆ ಅದನ್ನು ಇನ್ನಿತರ ಜನರಿಗೆ ಬರಹದ ಮೂಲಕ ಕಳುಹಿಸಿದರೆ ಸ್ವರ್ಗ ವಿದೆ ಎಂಬ ಪ್ರವಾದಿ ವಚನ ಇದೆಯೆಂಬ ಸುಳ್ಳಾಡುವಿಕೆಯೊಂದಿಕೆ ಸಮೂಹವನ್ನು ವಂಚಿಸಿ ಬರೆಯುವ ಹಲವು ಬರಹಗಾರರು ನಮ್ಮೆಡೆಯಲ್ಲಿ ಬೆಳೆಯುತ್ತಿದ್ದಾರೆ. ಇದರ ವಾಸ್ತವ ಏನು❔ ಸುಳ್ಳಾಡಿದರೆ ಪ್ರವಾದಿವರ್ಯರು ತಿಳಿ ಹೇಳಿದ ವಿಷಯ ಏನು ‼️
==========================
ಪ್ರವಾದಿವರ್ಯರು(ﷺ) ಹೇಳಿದರು. ನೀವು ಸತ್ಯವನ್ನು ಹೇಳಿರಿ. ಸತ್ಯ ನಿಮ್ಮನ್ನು ಪುಣ್ಯಕ್ಕೂ , ಪುಣ್ಯವು ಸ್ವರ್ಗಕ್ಕೆ ಕರೆದೊಯ್ಯುವುದು. ಮನುಷ್ಯ ಸತ್ಯ ಹೇಳುವುದು ಮತ್ತು ಸತ್ಯದಲ್ಲಿ ನಿಷ್ಠೆಯಿರಿಸಿದರೆ ಅಲ್ಲಾಹನ ಬಳಿ ಸತ್ಯಸಂಧ(ಸಿದ್ದೀಕ್) ಎಂಬ ಪದವಿಗೆ ಅರ್ಹನಾಗುವನು. ನೀವು ಸುಳ್ಳು ಹೇಳುವುದರಿಂದ ಎಚ್ಚರ ವಹಿಸಿರಿ. ಸುಳ್ಳು ಅಧರ್ಮದೆಡೆಗೂ, ಅಧರ್ಮ ನರಕದೆಡೆಗೂ ಕರೆದೊಯ್ಯುತ್ತದೆ. ನಿರಂತರ ಸುಳ್ಳು ಹೇಳುವುದರಿಂದ ಮನುಷ್ಯ ಅಲ್ಲಾಹನ ಬಳಿ ಸುಳ್ಳುಗಾರ (ಕಝ್ಝಾಬ್) ಎಂಬ ಕೆಟ್ಟ ಹೆಸರಿಗೆ ಪಾತ್ರನಾಗುವನು”.
ಈ ಹದೀಸಿನಿಂದ ನಾವು ಮನವರಿಕೆ ಮಾಡಬೇಕಾದದ್ದು ಸತ್ಯವನ್ನು ಹೇಳಬೇಕೆಂದು. ಸತ್ಯವು ನಮ್ಮನ್ನು ಒಳಿತನೊಂದಿಗೆ ಸ್ವರ್ಗದ ಹಾದಿಗೂ, ಸುಳ್ಳನ್ನು ನುಡಿಯಬಾರದೆಂದೂ ಸುಳ್ಳಿನಿಂದ ಸಾಗುವುದು ನರಕದ ಹಾದಿಗೆ ಎಂದಾಗಿದೆ.
ಸತ್ಯವಿಶ್ವಾಸಿಗಳ ಗುಣ-ಸ್ವಭಾವಗಳು ಇನ್ನಿತರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬಹುದು. ಅವುಗಳಲ್ಲಿ ಪ್ರಧಾನವಾದದ್ದು ಸತ್ಯಸಂಧತೆಯಾಗಿದೆ. ಅಲ್ಲಾಹನ ಮಾರ್ಗದಲ್ಲಿ ಪ್ರವೇಶಿಸುವವನ ಆಯುಧವಾಗಿದೆ ಈ ಸತ್ಯಸಂಧತೆ. ಉತ್ತಮ ಕರ್ಮಗಳನ್ನು ಅನುಷ್ಠಾನಿಸುವುದಕ್ಕೂ, ಪೂರ್ಣತೆ ಗಳಿಕೆಗೂ ಸತ್ಯಸಂಧತೆ ಅವನನ್ನು ಪ್ರೇರೇಪಿಸುತ್ತದೆ.
ಮುಸ್ಲಿಮ್ ಯಾರೆಂದು ಅವನ ಮಾತು, ವರ್ತನೆ ತೋರಿಸಿ ಕೊಡುತ್ತದೆ. ಅಲ್ಲಿ ಸತ್ಯಸಂಧತೆ ಪ್ರಮಾಣಿಕತೆಗಳು ಎದ್ದು ನಿಲ್ಲಬೇಕು. ಚಿಂತನೆಯಿಂದ ಹಿಡಿದು ಜೀವನದ ಸರ್ವೋಪರಿ ಕ್ಷೇತ್ರವು ಸತ್ಯ ಮನೋಹರವಾಗಿಸಲು ವಿಶ್ವಾಸಿಗೆ ಸಾಧ್ಯವಾಗಬೇಕು. ಹೀಗೆ ಅವನು ಅಲ್ಲಾಹನ ಬಳಿ ಸಿದ್ದೀಕ್ ಪದವಿಗೇರಬಹುದಾಗಿದೆ.
ಸುಳ್ಳು ಹೇಳುವುದನ್ನು ಪ್ರವಾದಿವರ್ಯ(ﷺ)ರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಅಭ್ಯಾಸ ಒಬ್ಬನನ್ನು ಅಲ್ಲಾಹನ ಬಳಿ ಸುಳ್ಳುಗಾರನಾಗಿಸುತ್ತದೆ. ಲೋಕದ ತಾತ್ಕಾಲಿಕ ಲಾಭಕ್ಕೆ ಕೆಲವರು ಸುಳ್ಳು ದಾರಿ ಹಿಡಿಯುತ್ತಾರೆ. ಇವತ್ತು ಕಾಣುವ ಕೆಲವು ಬರಹಗಳು ಈ ವಿಭಾಗಕ್ಕೆ ಸೇರಿದ್ದಾಗಿದೆ. ಕೆಲವೊಂದು ತಿಂಗಳಿಂದ ಹಲವಾರು ಬರಹಗಳನ್ನು ನಾನು ಓದಿದ್ದೇನೆ. ಓದಿದ ಹಲವುಗಳಲ್ಲಿ ಕೆಲವೊಂದು ಬರಹಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.
ಒಂದನೆಯದು ವಾಟ್ಸಪ್ ಗ್ರೂಪಿನಲ್ಲಿ ನಾನು ಓದಿದೆ.”ಈ ಬರಹವನ್ನು ತಾವು ಪೂರ್ತಿಯಾಗಿ ಓದಿರಿ ಹಾಗೂ 10 ಜನರಿಗೆ ಶೇರ್ ಮಾಡಿ. ಶೇರ್ ಮಾಡದಿದ್ದರೆ ನಿಮಗೆ ಹಲವು ಆಪತ್ತುಗಳು ಬರುತ್ತದೆ ಎಂದು.”ಈ ಬರಹವನ್ನು ಓದಿ ಅದೆಷ್ಟೋ ಮಂದಿ ಆಪತ್ತಿನ ಭಯದಿಂದ ಶೇರ್ ಮಾಡಿದ್ದುಂಟು.ಕೆಲವರು ವಾಸ್ತತೆಯನ್ನು ತಿಳಿಯಲು ಹಲವು ಜನರಿಗೆ ಶೇರ್ ಮಾಡಿದ್ದುಂಟು. ಏನೇ ಇರಲಿ ಇಂತಹ ವಿಷಯಗಳು ನಮ್ಮ ಮುಂದೆ ಬಂದಾಗ ತಲೆಯಲ್ಲಿ ಸ್ವಲ್ಪ ಮೆದುಳಿದ್ದವನಿಗೂ ಇದರ ಸತ್ಯತೆಯನ್ನು ಮನವರಿಕೆ ಮಾಡಲು ಸುಲಭ .
ಕೇವಲ ವಾಟ್ಸಪ್ ಮೂಲಕ ಕೆಲವೊಂದು ಜನರಿಗೆ ಕಳುಹಿಸಿದರೆ ಆಪತ್ತಿನಿಂದ ಪಾರಾ………..ವಾರ್ರೆ಼ವಾ಼ ಇನ್ನು ವಿಪತ್ತುಗಳಿಂದ ಪಾರಾಗಬೇಕಾದರೆ ದುಆ ಇನ್ನಿತರ ಇಬಾದತ್ತಿನ ಅವಶ್ಯಕತೆ ಇಲ್ಲ. ಬದಲಾಗಿ ವಾಟ್ಸಪ್ ನಲ್ಲಿ ಶೇರ್ ಮಾಡಿದರೆ ಸಾಕು ಅಲ್ಲವೇ….ಸ್ವಂತ ಬುದ್ದಿಯಿಂದ ಚಿಂತಿಸಿದರೆ ಉತ್ತರ ಲಭಿಸುವಂತಹ ಕಾರ್ಯಗಳನ್ನು ನಾನು ತಾತ್ಸಾರವಾಗಿ ಕಂಡು ಇತರರಿಗೆ ಕಳುಹಿಸುತ್ತೇವೆ.
ಎರಡನೆಯದು ಈಗ ನಮ್ಮೆಡೆಯಲ್ಲಿ ಹರಡುತ್ತಿರುವ ರಮಳಾನಿನ ಎಣಿಕೆಯ ಕುರಿತಿರುವ ದಡ್ಢತನ. ರಮಳಾನ್ ಆಗಮನಕ್ಕೆ ಇನ್ನು 93 ದಿನಗಳಿದೆ ಇದನ್ನು ಇತರರಿಗೆ ಕಳುಹಿಸಿದರೆ ಸ್ವರ್ಗವಿದೆ ಎಂದು ಪ್ರವಾದಿ ಯವರು ಹೇಳಿದ್ದಾರೆಂಬ ಬರಹದ ಕುರಿತು ನಾವು ಅಲ್ಪವಾಗಿ ಚಿಂತಿಸೋಣ.
ರಮಳಾನನ್ನು ಸ್ವಾಗತಿಸೋಣ, ಅದಕ್ಕಾಗಿ ತಯಾರಾಗೋಣ,ಯಾರೂ ಬೇಡವೆನ್ನಲಾರರು.ಆದರೆ ಇದನ್ನು ತಿಳಿಸಿದರೆ ಸ್ವರ್ಗವಿದೆ ಎಂಬ ಬರಹಕ್ಕೆ ಪ್ರೂತ್ಸಾಹ ನೀಡದಿರಿ. ಇದನ್ನೂ ಕೇವಲ ಅಲ್ಪ ಬುದ್ದಿಯೊಂದಿಗೆ ಆಲೋಚಿಸಿದರೆ ಉತ್ತರ ಲಭಿಸುತ್ತದೆ.
ಇನ್ನೂ ಇದಕ್ಕಿಂತಲೂ ಕಠೋರವಾದದ್ದು ಪ್ರವಾದಿ (ﷺ) ರವರು ಹೇಳದ ಮಾತನ್ನು ಪ್ರವಾದಿ ﷺ ಹೇಳಿದ್ದಾರೆಂದು ಜನರಿಗೆ ಮೋಸ ಮಾಡುವವರ ಅವಸ್ಥೆಯ ಕುರಿತು ಆಲೋಚಿಸಬೇಕಾಗಿದೆ.
ಯಾರಾದರೂ ನಬಿ ﷺِ ರವರ ಹೆಸರು ಹೇಳಿ ಸುಳ್ಳು ವಾರ್ತೆ ಹಂಬಿಸುತ್ತಾರೋ ಅವರು ನರಕದಲ್ಲಿ ಒಂದು ಆಸನವನ್ನು ಕಾದಿರಿಸಿಕೊಳ್ಳಲಿ ಎಂದು.
ಪ್ರವಾದಿﷺ ರ ಮಾತನ್ನು ನಾವು ಗಾಂಭೀರ್ಯತೆಯೊಂದಿಗೆ ಮನಗಾಣಬೇಕಾಗಿದೆ.
ಮೂರನೆಯದ್ದು ….ಒಂದಲ್ಪ ಬರಹದೊಂದಿಗೆ ಮೂಬೈಲ್ ಚಾರ್ಜ್ ಮಾಡುವ ಇಮೋಜ್ ಹಾಕಿ ಇದನ್ನು ನೀವು ಶೇರ್ ಮಾಡಿದರೆ ತಮ್ಮ ಮೊಬೈಲಿನಲ್ಲಿ ಚಾರ್ಜ್ ಫುಲ್ ಆಗುತ್ತೇ ಎಂದು.ಇದೆಂತಹಾ ಹುಚ್ಚುತನ ಅಲ್ಲವೇ ಆದರೂ ಏನಂತೇ ….ಶೇರ್ ಮಾಡುವವರು ಶೇರ್ ಮಾಡಿಯೇ ತೀರುತ್ತಾರೆ.
ಇಂತಹಾ ಅದೆಷ್ಟೋ ಹುಚ್ಚುತನ ಮೆಸೆಜ್ ಬರುತ್ತಲೇ ಇದೆ.ಅದನ್ನು ಬರೆಯುವ ಬರಹಗಾರರೂ ಕಮ್ಮಿಯೇನು ಇಲ್ಲ.ಇಂತಹ ಹಲವು ಬರಹಗಳು ಮುನುಷ್ಯನನ್ನು ಬಕ್ರಾ ಮಾಡಿಕ್ಕಾಗಿದೆ.ಪ್ರವಾದಿಯವರ ನುಡಿ “ತಮಾಷೆ ಮಾಡುವ ಉದ್ದೇಶದಿಂದಲೂ ನೀವು ಸುಳ್ಳಾಡಬಾರದು.”
ಇಸ್ಲಾಮಿನ ನೈಜ್ಯ ಚೌಕಟ್ಟಿನೊಂದಿಗೆ ಬಾಳಬೇಕಾದರೆ ಮತಪಂಡಿತರೊಂದಿಗೆ ಹಲವು ಕಾರ್ಯಗಳನ್ನು ಕಡ್ಡಾಯವಾಗಿಯೂ ಕಲಿಯಬೇಕಾಗಿದ.
ಇಂತಹ ಹಲವಾರು ಊಹಾ ಪೂಹಾ ಗಳಿಂದ ದೂರಸರಿದು ದೀನಿನ ಚೌಕಟ್ಟಿನೊಂದಿಗೆ ಮುಂದೆ ಸಾಗಲು ಪ್ರಯತ್ನಿಸೋಣ.ಅಲ್ಲಾಹನು ಅನುಗ್ರಹಿಸಲಿ.