Home ಅಂಕಣಗಳು ಜ್ಞಾನದ ಹೆಬ್ಬಾಗಿಲು ಕೆಐಸಿಯ ಅಕ್ಷರ ಮಡಿಲು

ಜ್ಞಾನದ ಹೆಬ್ಬಾಗಿಲು ಕೆಐಸಿಯ ಅಕ್ಷರ ಮಡಿಲು

📝 ಎ.ಎಸ್.ಮಂಡಾಡಿ
ಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ

ಪರಿಶುದ್ಧ ಇಸ್ಲಾಮಿನ ಆಶ್ರಯ ಆದರ್ಶಗಳನ್ನು ವಿಶ್ವದೆಲ್ಲೆಡೆ ಪಸರಿಸಲು, ಅಲ್ಲಾಹನ ಪರಿಶುದ್ಧ ಇಸ್ಲಾಂ ಧರ್ಮಗಳ ಅನುಸಾರವಾಗಿ ಬದುಕಲು, ಒಂದು ಸುಂದರ ವಿಧ್ಯಾ ಕೇಂದ್ರವನ್ನು ಸ್ಥಾಪಿಸಲು, ಶಾಂತಿಯ ವಾತಾವರಣವನ್ನು ನೆಲೆ ನಿಲ್ಲಿಸಲು, ಜ್ಞಾನವನ್ನು ಕರಗತ ಮಾಡಲು ಸಮುದಾಯದ ಮತ್ತು ಕಾಲದ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಕೆಐಸಿ ಎಂಬ ಬೃಹತ್ ವಿಧ್ಯಾ ಭಂಡಾರದ ಕವಾಟದಿಂದ ಮುಕ್ತವಾಯಿತು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

1996ರಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ 6 ಮಕ್ಕಳ ಮೂಲಕ ಸ್ಥಾಪಿಸಲ್ಪಟ್ಟ ಈ ವಿದ್ಯಾ ಕೇಂದ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ(KIA) ಇದು ಭಾರತವೆಂಬ ಮಣ್ಣಿನಲ್ಲಿ ಕರ್ನಾಟಕದ ಸೊಬಗಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನವೆನಿಸಿರುವ ಪುತ್ತೂರು ತಾಲ್ಲೂಕಿನ ಹೃದಯ ಭಾಗವಾದ ಕುಂಬ್ರ ಎಂಬ ಪವಿತ್ರ ಮಣ್ಣಿನಲ್ಲಿ ಶಂಸುಲ್ ಉಲಮಾರ ನೋಟದ ಮೇರಗಿನಲ್ಲಿ ಪಾಣಕ್ಕಾಡ್ ಕುಟುಂಬದ ಕಣ್ಮಣಿ ಸಯ್ಯದ್ ಮೊಹಮ್ಮದಲಿ ಶಿಹಾಬ್ ತಂಙಳ್ ರವರ ಶಿಲಾನ್ಯಾಸದೊಂದಿಗೆ ಈ ಜ್ಞಾನ ಭಂಡಾರದ ಕೇಂದ್ರವು ಆರಂಭಗೊಂಡಿತ್ತು.

1996ರಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಆರು ಮಕ್ಕಳೊಂದಿಗೆ ಸ್ಥಾಪಿಸಲ್ಪಟ್ಟ ಈ ವಿದ್ಯಾ ಕೇಂದ್ರವು ಹಿಂದಕ್ಕೆ ನೋಡಲೇ ಇಲ್ಲ.ಇದರ ಸ್ಥಾಪಕರು ಹಗಲು ರಾತ್ರಿ ಎನ್ನದೆ ಪರಿಶ್ರಮಪಟ್ಟರು. ಈ ಪರಿಶುದ್ದ ಮಣ್ಣಿನಲ್ಲಿ ಮೊದಲು ಆರಂಭಗೊಂಡದ್ದು ಅಲ್ಲಾಹನ ಪರಿಶುದ್ಧ ಕುರಾನ್ ಕಂಠಪಾಠ ಮಾಡುವ ಹಿಫ್ಝ್ ಕೇಂದ್ರವಾಗಿತ್ತು ತೆರಯಲ್ಪಟ್ಟದ್ದು.ದಿನಗಳುರುಳಿದಂತೆಯೇ ಈ ಕೇಂದ್ರದ ಉನ್ನತಿಯು ಉನ್ನತಿಯಿಂದ ಉನ್ನತಿಗೇರಿತು. ಕೇಂದ್ರವು ಉನ್ನತಿಗೇರುವಾಗ ವಿದ್ವಾಂಸರ ಆಲೋಚನೆಯು ಒಂದು ಶೈಕ್ಷಣಿಕ(ಧಾರ್ಮಿಕ &ಭೌತಿಕ) ಕ್ಷೇತ್ರವನ್ನು ಕರಗತ ಮಾಡುವ ವಿದ್ಯಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದಾಗಿತ್ತು.ಇದು ಮೊದಲ ಉದ್ದೇಶವಾಗಿದ್ದರೂ ಕೆಲವೂಂದು ಕಾರಣಗಳಿಂದ ವರ್ಷಗಳು ಉರುಳುತ್ತಿದ್ದಂತೆಯೇ ಸಫಲಗೊಂಡಿತು.

2003ರಲ್ಲಿ ಕರ್ನಾಟಕದ ಮಣ್ಣನಲ್ಲಿ ಬಿರದೊಂದನ್ನು ಕೊಡುವ ಪ್ರಥಮ ವಿದ್ಯಾ ಕೇಂದ್ರವಾಗಿ ಬೆಳೆದು ಬಂದಿತು ಈ ಕುಂಬ್ರದ ಮಣ್ಣಿನಲ್ಲಿ ತಲೆ ಎತ್ತಿದ ಕೆಐಸಿ ಎಂಬ ವಿಧ್ಯಾ ಸಂಸ್ಥೆ .ಈ ಸಮುದಾಯದ ಅಭಿಮಾನವಾಗಿಯೂ ” ಮೌಲಾನ ಫಾಝಿಲ್ ಕೌಸರಿ” ಎಂಬ ಕೋರ್ಸ್ ಪದ್ಧತಿಯು ಜನರ ಮನಸನ್ನು ಸೆಳೆಯಿತು. ಮೊದಮೊದಲು ಹಲವು ಕಷ್ಟ ತ್ಯಾಗಗಳನ್ನು ಸಹಿಸಿ ಕಲಿತು ಪ್ರಥಮ ಬ್ಯಾಚ್ ಆರು ಕೌಸರಿ ಪಡೆಯಾಗಿ ಸಮುದಾಯಕ್ಕೆ ಅರ್ಪಣೆಯಾಯಿತು. ಆದದ್ದು ಕೇವಲ ಆರು ಕೌಸರಿಯಾದರೆ ಜನರ ಮನಸಿನಲ್ಲಿ ಮನೆಮಾಡಿತು.ಆ ಆರು ಕೌಸರಿ ಪಡೆ ವಿಧ್ಯಾ ಕೇಂದ್ರಗಳಲ್ಲಿಯೂ, ಭಾಷಣಗಾರರಾಗಿಯೂ, ಲೇಖಕರಾಗಿಯೂ, ಸಮುದಾಯಕ್ಕೆ ಒಳಿತನ್ನು ಭೋದಿಸುವ ದಾಯಿಯಾಗಿಯೂ, ಸಮುದಾಯಕ್ಕೆ ನೇತೃತ್ವ ನೀಡುವವರಾಗಿಯೂ ಮೂಡಿ ಬಂದರು. ಕಾಲ ಉರುಳಿದಂತೆ ವರ್ಷಗಳು ಕಳೆದಂತೆ ಕೆಐಸಿಯ ನಾಮವು ಬಾನೆತ್ತರಕ್ಕೇರಿತು. ಅದರಲ್ಲೂ ಕರ್ನಾಟಕದ ರಾಜ್ಯದ ಎಸ್.ಕೆ.ಎಸ್.ಎಸ್.ಎಫ್ ಪ್ರಥಮ ಅಧ್ಯಕ್ಷರ ಪದವಿಯು ಹೊಳಿದು ಬಂದದ್ದು ಈ ಕೌಸರಿ ಪಡೆಯಲ್ಲಿ ಒಬ್ಬರಾದ ಅನೀಸ್ ಕೌಸರಿ ಎಂಬವರಿಗೆ ಆಗಿತ್ತು.
📿ಕಾಲ ಉರುಳುತ್ತಿದ್ದಂತೆ ಹಲವು ಕೌಸರಿ ಪಡೆಯು ದೀನಿ ರಂಗಕ್ಕೆ ಸಮರ್ಪಣೆಯಾಯಿತು.ಈ ಸಮುದಾಯಕ್ಕೆ ಕೌಸರಿ ಪಡೆಯು ವಿಸ್ಮಯವಾಯಿತು. ಹಲವು ಸ್ಥಳಗಳಲ್ಲಿಯೂ ಇಂದು ಕೌಸರಿ ಪಡೆಯ ದೀನೀ ದಅ್ ವಾ ನಡೆಯುತ್ತಲೇ ಇದೆ.

📿ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯು ಮೊದಲು ರೂಪು ಕೊಟ್ಟದ್ದು ಹಿಫ್ಝ್ ಎಂಬ ಕುರಾನ್ “ಕಂಠಪಾಠ ಮಾಡುವ ವಿಧ್ಯಾಮಾನಕ್ಕೆ” ಆಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅದು ಸ್ಥಗಿತಗೊಂಡಿದ್ದು ಅಕಾಡೆಮಿಯು ಉನ್ನತಿಗೇರುತ್ತಲಿರುವಾಗ ಹಿಫ್ಝ್ ಸೆಂಟರ್ ನಿರ್ಮಾಣದ ತೀರ್ಮಾನವಾಯಿತು.ಈ ತೀರ್ಮಾನವು ಸಫಲಗೊಳ್ಳುತ್ತದೆ. ಶೈಖುನಾ ಶಂಸುಲ್ ಉಲಮಾರ ಹೆಸರಿನಲ್ಲಿ “ಶಂಸುಲ್ ಉಲಮಾ ಹಿಫ್ಝ್” ಸೆಂಟರ್ ರೂಪುಗೊಂಡಿತ್ತು. ಹಲವು ಹಾಫಿಝ್ಗಳನ್ನು ಇದೀಗಲೇ ಈ ಸಮುದಾಯಕ್ಕೆ ಸಮರ್ಪಿಸಿದೆ.
ಇಲ್ಲಿಗೆ ನಿಲ್ಲಲಿಲ್ಲ ಕೆ. ಐ.ಸಿ.ಯ ಕೊಡುಗೆಗಳು. ಹಲವು ಕುಟುಂಬವು ಬಡತನದಲ್ಲಿರುವಾಗ ಅವರಿಗೂ ನೆರವಾಗಬೇಕಾಗಿ , ಅವರಿಗೆ ಆಶ್ರಯವಾಗಿ ನಿಲ್ಲಲು ಪ್ರಾರಂಭಿಸುತ್ತದೆ. ಹಲವಾರು ಬಡ ಕುಟುಂಬದ ಮಕ್ಕಳನ್ನು ಕರೆತಂದು ಬೋರ್ಡಿಂಗ್ ಎಂಬ ಸಂವಿಧಾನವನ್ನು ಸ್ಥಾಪಿಸಿ ಅವರಿಗೆ ಮದ್ರಸ ಮತ್ತು ಶಾಲಾ ತರಬೇತಿಯೊಂದಿಗೆ ದೀನಿ ದಅ್ ವತ್ತಿನ ಮುಂದಿನ ಮಾರ್ಗಕ್ಕೆ ಬೇಕಾದ ವಿಧ್ಯೆಯನ್ನು ಕೊಟ್ಟು ಅವರನ್ನು ಸಮರ್ಥರನ್ನಾಗಿಸುವ ಪ್ರಯತ್ನಪಟ್ಟರು. ಹಲವಾರು ಮುಸ್ಲಿಂ ಸಮುದಾಯದ ಕಣ್ಮಣಿಯಾಗಿದೆ. ರಂಜಾನ್ ತಿಂಗಳಲ್ಲಿ ಕೆಐಸಿ ವಿದ್ಯಾರ್ಥಿಗಳಲ್ಲಿ ತೀರ ಬಡ ಕುಟುಂಬಕ್ಕೆ ಕಟ್ಟನ್ನು ವಿತರಿಸಲಾಗುತ್ತದೆ.


ಈ ಸಮುದಾಯಕ್ಕೆ ಇನ್ನೂ ಅವಶ್ಯಕತೆ ಇರುವ ಒಂದು ಬಯಕೆಯಾಗಿತ್ತು ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಹೊಂದಿರುವ ವಿದ್ಯೆಯನ್ನು ಕರಗತ ಮಾಡಿ ಕೊಡುವ ಒಂದು ಅನುಗ್ರಹೀತ ವಿದ್ಯಾಲಯವನ್ನು ಈ ಕರ್ನಾಟಕದ ಮಣ್ಣಲ್ಲಿ ಸ್ಥಾಪಿಸಬೇಕು ಎಂದು. ಆ ಒಂದು ಆಸೆಯನ್ನು ಈ ಪರಿಶುದ್ಧ ಕುಂಬ್ರ ಮಣ್ಣಲ್ಲಿ ತೆರೆದು ಸಮುದಾಯಕ್ಕೆ ಮತ್ತೊಂದು ಗರಿಯನ್ನು ಬಾಚಿ ಕೊಂಡಿತು._ “ವಾಫಿ” ಎಂಬ ಆ ಅಂತಾರಾಷ್ಟ್ರೀಯ ಸನದಿನೊಂದಿಗೆ ಭೂಲೋಕ ಸುತ್ತಿ ದೀನೀ ದಅ್ ವಾವನ್ನು ಕೈಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಹಲವಾರು ಭಾಷೆಯನ್ನು ಕರಗತ ಮಾಡಿ ಕಾಲಕ್ಕೆ ತಕ್ಕಂತೆ ಜನರನ್ನು ಬೋಧಿಸುವ ಒಂದೊಳ್ಳೆ ಪಠ್ಯ ಚಟುವಟಿಕೆ ಪದ್ದತಿಯ ಅಡಿಯಲ್ಲಿ ಬೆಳೆಯತೊಡಗಿತು.

ಸಮುದಾಯವೇ ಇದರ ವರಮಾನ.ವಿದೇಶ-ಸ್ವದೇಶ ಜನರ ಸಹಾಯ ಸಹಕಾರದಿಂದ ಈ ವಿಧ್ಯಾ ಸಂಸ್ಥೆಯು ಬಾನೆತ್ತರಕ್ಕೇರುತ್ತಲೇ ಇದೆ.ಇದನ್ನು ಒಂದು ವಿಶ್ವವಿಧ್ಯಾನಿಯ ಮಾಡುವ ಕನಸು ನಮ್ಮ ಮುಂದೆ ಇದೆ.ಅದಕ್ಕಾಗಿ ಹಲವಾರು ಯೋಜನೆಗಳನ್ನು ಮಾಡುತ್ತಲೇ ಇದೆ. ವಿಧ್ಯಾರ್ಥಿಗಳ ಪೋಷಕರಿಂದ ದೊರೆಯುವ ಪ್ರೋತ್ಸಾಹವು ಅಷ್ಟಿಷ್ಟಲ್ಲ.ಏನೇ ಆದರೂ ಸಮುದಾಯ ನಮ್ಮೊಂದಿಗಿದೆ ಎಂಬ ಭರವಸೆಯೊಂದಿಗೆ ಈ ವಿಧ್ಯಾ ಕೇಂದ್ರವು ದಿನದೂಡುತ್ತಲೇ ಇದೆ.ತಮ್ಮ ಸಹಕರಾರ ಸದಾ ಇರಲಿ ಎಂದು ಬಯಸುತ್ತಾ… ಇದಕ್ಕಾಗಿ ರಾತ್ರಿ-ಹಗಲೆನ್ನದೇ ಶ್ರಮವಹಿಸುವ ಸರ್ವರರನ್ನೂ ಅಲ್ಲಾಹನು ಅನುಗ್ರಹಿಸಲಿ.

ಪರಸ್ಪರ ದುಆ ಮಾಡಲು ಮತ್ತು ಶೇರ್ ಮಾಡಲು ಮರೆಯದಿರಿ.

Previous articleಮೊಬೈಲ್ ಗೇಮ್ ನಲ್ಲಿ ಶೂಟ್ ಮಾಡುವ ಯುವಕರೇ, ತಾಕತ್ತಿದ್ದರೆ ಝುಬೇರ್ ನೇರೆಂಕಿ ಯವರಂತೆ ಉಗ್ರಗಾಮಿಗಳನ್ನು ಶೂಟ್ ಮಾಡಿ.
Next articleಅಮ್ಮಾ…..ನಾನು ಶ್ರೀಮಂತನೇ ಹೊರತು, ನನ್ನ ಹೃದಯವಲ್ಲ…

LEAVE A REPLY

Please enter your comment!
Please enter your name here