ಎ.ಎಸ್.ಮಂಡಾಡಿ (ಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ)
ಅಮ್ಮಾ ಎಂಬ ಪದ ಕೇಳುವಾಗ ಏನೆಲ್ಲಾ ಒಂದು ರೋಮಂಚನ ಜನ್ಮ ನೀಡುವಾಗ ವೇದನೆಯ ಉತ್ತುಂಗವನ್ನು ತಲುಪಿ ಅದನ್ನೆಲ್ಲಾ ಸಹಿಸಿ ಕೊನೆಗೂ ನಗು-ಮುಖದಿಂದ ನಮಗೆ ಜನ್ಮ ನೀಡುವಳು..
ಒಂದು ನಡು ಮಧ್ಯಾಹ್ನ ಹಸಿವಿನಿಂದ ಬಳಲಿದ ಒಂದು ಸ್ರ್ತೀಯು ಹಸಿವು ತಾಳಲಾರದೆ ದೊಡ್ಡ ಹೋಟೆಲಿನ ಮುಂದೆ ನಿಂತು ಅನ್ನವನ್ನು ಬೇಡುತ್ತಾಳೆ.ಬೇಡಲ್ಪಡುತ್ತಿರುವ ಆ ಹೋಟೆಲ್ ಆ ಪ್ರದೇಶದಲ್ಲಿ ಅತಿ ದೊಡ್ಡ ಹೋಟೆಲಾಗಿತ್ತು. ಬೇಡುತ್ತಿರುವ ಸ್ರ್ತೀಯ ಬಳಲಿದ ಮುಖವನ್ನು ನೋಡುತ್ತಾ ಹೋಟೆಲಿನ ಒಬ್ಬ ಸೇವಕ ಹೊರ ಬಂದು ಉಪಚರಿಸಲು ಪ್ರಾರಂಭಿಸುತ್ತಾ…ತಮ್ಮ ಪರಿಚಯ ತಿಳಿಸಬಹುದೇ? ತಮಗೆ ಮಕ್ಕಳಲ್ಲವೇ ? ತಮಗೆ ಮನೆ ಇರಬಹುದಲ್ವಾ ! ಯಾಕಾಗಿ ಈ ತರಹ ಬೇಡುತ್ತಾ ತಿನ್ನುತ್ತಿದ್ದೀರಿ ? ಎಂದು ಕೇಳಿದಾಗ…..ಆ ತಾಯಿಯು ಜೋರಾಗಿ ಅಳುತ್ತಾ ಒಂದೊಂದನ್ನು ಹೇಳಲು ಪ್ರಾರಂಭಿಸುತ್ತಾಳೆ.
ನಾನು ಒಳ್ಳೆಯ ಮನೆತನದಿಂದ ಬಂದಂತಹ ಒಬ್ಬಳು ಸ್ತ್ರೀ.ನನ್ನ ಗಂಡ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ನನಗೆ ಇಬ್ಬರು ಗಂಡು ಮಕ್ಕಳು. ಅವರು ಒಳ್ಳೆಯ ಉದ್ಯೋಗದಲ್ಲಿದ್ದಾರೆ.ಅವರಿಬ್ಬರಿಗೂ ಒಳ್ಳೆಯ ವಿದ್ಯೆಯನ್ನು ಕೊಟ್ಟು ಇಬ್ಬರನ್ನೂ ಉನ್ನತ್ತಿಗೇರಿಸಿದ್ದೇವೆ.ಒಳ್ಳೆಯ ಉದ್ಯೋಗ ದೊರೆತಿದೆ. ತುಂಬಾ ಸಂತೋಷಕರವಾದ ಕುಟುಂಬ ಜೀವನ.
ಆದರೆ ವಿಧಿಯು ನಮ್ಮ ಸಂತೋಷಕ್ಕೆ ತಡೆಯಾಯಿತು. ಗಂಡನ ಮರಣವು ಸುಂದರ ಜೀವನದ ಗಳಿಗೆಯನ್ನು ದುಃಖದ ಜೀವನವನ್ನಾಗಿ ಮಾರ್ಪಡಿಸಿತು.ಗಂಡನ ಮರಣಾನಂತರ ಇಬ್ಬರು ಗಂಡು ಮಕ್ಕಳು ಮನೆಯ ಪಾಲನ್ನು ಕೇಳಲಾರಂಭಿಸಿದರು. ಅವರಿಗೆ ಮನೆಯ ಪಾಲನ್ನು ಕೊಡಲಾಯಿತು.ನಂತರ ನನ್ನನ್ನು ನೋಡುವಲ್ಲಿ ಪರಸ್ಪರ ಕಚ್ಚಾಟ ಮಾಡ ತೊಡಗಿದರು. ಕೊನೆಗೆ ಇಬ್ಬರೂ ನನ್ನಿಂದದೂರವಾದರು. ದುಃಖದಿಂದ ಹಸಿವಿಗೆ ಅನ್ನವಿಲ್ಲದೆ ಸಿಕ್ಕಾ-ಸಿಕ್ಕಾ ಜನರಲ್ಲಿ ಬೇಡುತ್ತಾ ಕಾಲ ಕಳೆಯುತ್ತಿದ್ದೇನೆ. ನನಗೆ ಒಂದು ಬೀಡು ಕೂಡಾ ಇಲ್ಲ.ಬೆಳಗ್ಗೆ-ರಾತ್ರಿ ಚಳಿಯಲ್ಲಿ ಮಲಗುವಾಗ ನಾನು ಸಾಕಿದ ಮಕ್ಕಳು ಕಂಬಳಿ ಹೊದ್ದು ಮಲಗುತ್ತಿರುತ್ತಾರೆ.ನಾನು ಸಿಕ್ಕ-ಸಿಕ್ಕ ಸ್ಥಳದಲ್ಲಿ ಚಳಿಯಿಂದ ನರಳಿ ದಿನವನ್ನು ದೂಡುತ್ತೇನೆ ಎಂದು ಕಣ್ಣೀರಾಕಿದಳು.ಇಷ್ಟೊತ್ತು ಹೇಳಿದ ಇದನ್ನೆಲ್ಲಾವನ್ನ ಕೇಳಿದ ಸೇವಕನ ಕಣ್ಣಲ್ಲಿ ನೀರು ಬರತೊಡಗಿತು.
ಅಯ್ಯೋ ಎಂತಹ ಮಗನನ್ನು ನೀನು ಸಾಕಿದ್ದಿಯೋ ? ಅವರಿಗೆ ಒಂತಿಚ್ಚು ಕರುಣೆ ಇಲ್ಲವಾ ಎಂದು ಗೊಣಗಿಕೊಳ್ಳುತ್ತಾ ತನ್ನ ಹಣದಿಂದ ಆಹಾರವನ್ನು ತಮಗೆ ಕೊಡುತ್ತೇನೆ ಎಂದು ಹೇಳಿ ಹೋಟೇಲಿನ ಒಳಗೆ ಕರೆದೊಯ್ದು ತಮಗೆ ಇಷ್ಟವಾದ ಫಲಹಾರವನ್ನು ತೆಗೆದುಕೊಳ್ಳಿರಿ ಎಂದು ಮಹಾ-ತಾಯಿಗೆ ಹೇಳಿದಾಗ ತನ್ನ ಮಗನ ನೆನಪಾಯಿತು.ಕಾರಣ ಬಾಲ್ಯಕಾಲದಲ್ಲಿ ತಾಯಿಯನ್ನು ಇಬ್ಬರು ಮಕ್ಕಳು ಪ್ರೀತಿಸುತ್ತಿದ್ದ ಅ ನೋಟಕ್ಕೆ ಬೆಲೆಕಟ್ಟಲಾಗದು ಅಂತಹ ಪ್ರೀತಿಯಾಗಿತ್ತು.ಆದರೆ ಬೆಳೆದು ದೊಡ್ಡವರಾದಾಗ ನನ್ನನ್ನು ದೂರ ಮಾಡಿದರು. ಸಾದಾ ಊಟವನ್ನು ತಂದರೆ ಸಾಕು ಎಂದು ಹೇಳುತ್ತಾ ಕಣ್ಣೀರಾಕಿದಳು.ಸೇವಕನು ಸಾದಾ ಊಟದೊಂದಿಗೆ ಕೋಳಿ ಸಾಂಬಾರನ್ನು ಇನ್ನಿತರ ಪಲಹಾರಗಳನ್ನು ಕೊಡುತ್ತಾನೆ.
ಬಿಕ್ಕಿ-ಬಿಕ್ಕಿ ಅಳುತ್ತಾ ತಾಯಿ ಆ ಸೇವಕನನ್ನು ಮಗನೇ ಎಂದು ಜೋರಾಗಿ ಕರೆದು ತಬ್ಬಿಕೊಳ್ಳುತ್ತಾಳೆ. ಆ ಎಲ್ಲಾ ನೋಟವನ್ನು ಹೋಟೆಲಿನಲ್ಲಿರುವ ಸರ್ವರೂ ನೊಂದುಕೊಳ್ಳುತ್ತಾರೆ. ಇದನ್ನೆಲ್ಲವನ್ನೂ ದೂರದಿಂದಲೇ ನೋಡಿದ ಮಾಲಿಕನಿಗೆ ಮಾತ್ರ ಆ ತಾಯಿಯ ಪರಿಚಯ ಸಿಗಲಿಲ್ಲ.
ದಷ್ಟ-ಪುಷ್ಟವಾಗಿ ಬೆಳೆದಿರುವ ತಾಯಿಯನ್ನು ಬೀದಿಯಲ್ಲಿ ಬಿಟ್ಟಾಗ ತಾಯಿ ಬಳಲಿಕೆಯಿಂದ ತಾಯಿಯ ಪರಿಚಯ ಸಿಗಲಿಲ್ಲ.ದೂರದಿಂದ ಪಿಸುಗುಟ್ಟುತ್ತಾ ಆ ಸ್ರ್ತೀಯ ಬಳಿ ಬಂದಾಗ ಆ ಸ್ರ್ತೀಯು ನನ್ನ ಸ್ವತಹಃ ತಾಯಿಯಾಗಿದ್ದಳು.
ನನ್ನನ್ನು ಬೆಳೆಸಿದ ತಾಯಿಯನ್ನು ನಾನು ಮಾತ್ರ ಅರ್ಥ ಮಾಡದೇ ಕಷ್ಟ ಕೊಟ್ಟೇ ಆ ತಾಯಿಯನ್ನು ಯಾ ಅಲ್ಲಾಹ್ ಎನ್ನುತ್ತಾ ತಬ್ಬಿ ಹಿಡಿಯುತ್ತಾನೆ. ಪ್ರಶ್ಚಾತಾಪ ಪಡುತ್ತಾ ತಾಯಿಯ ಕಾಲಿಗೆ ಬೀಳುತ್ತಾನೆ ಬೇಡಿಕೊಳ್ಳುತ್ತಾನೆ.ನಾನು ದೊಡ್ಡ ಶ್ರೀಮಂತ ಆದರೆ ನನ್ನ ಹೃದಯ ಶ್ರೀಮಂತಿಕೆಯಿಂದ ಕೂಡಿಲ್ಲ.ನಾನು ಕಲ್ಲು ಹೃದಯದಿಂದ ಜೀವನವನ್ನು ಮುನ್ನಡೆಸಿದೆ ಎಂದು ತಾಯಿಯಲ್ಲಿ ಕ್ಷಮೆ ಕೇಳುತ್ತಾನೆ.
ಪ್ರಶ್ಚಾತಾಪಡುತ್ತಾ ನನ್ನ ಸರ್ವಸ್ವವೇ ತಾಯಿಯೆಂದು ನುಡಿಯುತ್ತಾ ಅಲ್ಲಿಂದ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿ ತಾಯಿಯ ಹಾರೈಕೆಯಲ್ಲಿ ಮುಂದಿನ ದಿನವನ್ನು ಕಳೆಯುತ್ತಾನೆ.ತಾಯಿಯ ಮಹತ್ವವನ್ನು ತಿಳಿದು ಜೀವನ ಸಾಗಿಸಲು ಅಲ್ಲಾಹನು ಅನುಗ್ರಹಿಸಲಿ .