✍️ ರಮ್ಲತ್. ಎ
ನವಮಾಸ ಒಡಲಲಿ ಹೊತ್ತು
ಈ ಜಗಕೆ ಪರಿಚಯಿಸುವಳು
ರಕ್ತ ಸ್ರಾವದಿ ನೋವನು ಸಹಿಸುತ
ಕಂದನ ಮೊಗವ ನೋಡುತ
ಆನಂದ ಪಡುವಳು.
ಮಗು ಅಳುವಾಗಲೆಲ್ಲ
ತನ್ನ ನೋವನು ಕಡೆಗಣಿಸಿ
ತನ್ನದೇ ರಾಗದಿ ಹಾಡುತ
ಮಗುವನು ಸಂತೈಸುವಳು
ಮಗುವು ಮೊದಲ ಹೆಜ್ಜೆಯನು
ಇಡುವಾಗ ಎಡವಿ
ಬೀಳದಿರಲೆಂದು
ಜಾಗರೂಕತೆಯ ವಹಿಸುವಳು
ಪ್ರೀತಿ ಮಮತೆ ಸಹನೆ
ಕರುಣೆಯನು ಉಸಿರಾಗಿಸಿ
ನೋವಿನ ಬವಣೆಯಲ್ಲೂ
ಹೃದಯ ತುಂಬಿ ನಗುವಳು
ಎಷ್ಟೇ ಕಷ್ಟ ಎದುರಾದರೂ
ನೋವನು ಲೆಕ್ಕಿಸದೆ
ಪ್ರೀತಿಯಿಂದ ಮುದ್ದು
ಮಾಡುತ ಸಾಕಿ ಸಲಹುವಳು
ತನಗಾಗಿ ಏನನ್ನೂ ಬಯಸದೆ
ತನ್ನ ಮಕ್ಕಳ ಭವಿಷ್ಯಕ್ಕಾಗಿ
ಹಗಲಿರುಳು ಶ್ರಮಿಸುತಾ
ನಿತ್ಯ ಕನಸು ಕಾಣುವಳು