Home ಅಂಕಣಗಳು ನಮ್ಮನ್ನು ಕಾಯುವವರಿಲ್ಲ

ನಮ್ಮನ್ನು ಕಾಯುವವರಿಲ್ಲ

📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು

ನಮ್ಮ ದೇಶದಲ್ಲಿ ಆಕ್ಸಿಜನ್‌ಗಾಗಿ ಹಾಹಾಕಾರ ಎದ್ದಿದೆ. ನಿಮಗಿಷ್ಟು ಅವರಿಗಿಷ್ಟು ಅನ್ನುವಂತೆ ಬೇಡಿಕೆಗಳನ್ನು ಪರಿಗಣಿಸದೇ ಹಂಚುವ ಕ್ರೂರತೆಯೂ ಮುಗಿಲುಮುಟ್ಟಿದೆ. ಅದರೆಡೆಯಲ್ಲಿ ಬೆಡ್‌ಗಳಿಗಾಗಿ ಲಾಬಿ ನಡೆಸುವ ಭ್ರಷ್ಟಾಚಾರದ ಅತಿದೊಡ್ಡ ಕೊಂಪೆಯು ಕೂಡಾ ರಾಡಿಯೆಬ್ಬಿಸಿದೆ. ತನ್ನವರು ಅತಿ ಕ್ರೂರವಾಗಿ ಪ್ರಾಣವಾಯುವಿನ ಕೊರತೆಯನ್ನು ಅನುಭವಿಸಿ ವಿಲವಿಲ ಒದ್ದಾಡಿ ಸಾಯುವ ದುರಂತ ಸುದ್ದಿಗಳು ಸಾಲುಸಾಲಾಗಿ ಬರುತ್ತಿವೆ.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ವಿಪರ್ಯಾಸಗಳು ನೋಡಿ. ತನ್ನ ಅವಕಾಶವನ್ನೂ ಅದರಲ್ಲೂ ತನ್ನ ಕ್ಷೇತ್ರದಲ್ಲಿ ಜನರು ಹಿಂಡು ಹಿಂಡಾಗಿ ಸಾಯುವ ಹೊತ್ತಲ್ಲೂ ಕೇಂದ್ರ ಸರ್ಕಾರದ ರಾಜ್ಯಗಳ ಪ್ರತಿನಿಧಿಯೆನಿಸಿಕೊಂಡ ಸಂಸದರು ತಮ್ಮ ತಮ್ಮ ಸೂರುಗಳಲ್ಲಿ ಹಾಯಾಗಿ ಕಾಲಕಳೆಯುತ್ತಿರುವುದು‌. ಕೊರೋನಾ ಸಾಂಕ್ರಾಮಿಕದ ಆರಂಭದಲ್ಲಿ ಶ್ರೀಮಂತರ ರೋಗ ಎಂಬಲ್ಲಿಂದ ಎರಡನೇ ಅಲೆಯಲ್ಲಿ ಪೂರ್ಣವಾಗಿ ಮಧ್ಯಮ ವರ್ಗದಲ್ಲಿ ವ್ಯಾಪಕವಾಗಿ ಹರಡಿದೆ. ಮುಂದುವರಿದೂ ಬಡವರ ಪ್ರಾಣಕ್ಕೂ ಕನ್ನಹಾಕುವ ಕೊರೋನದ ಯಾತ್ರೆ ವ್ಯಾಪಕವಾಗಿ ಪಸರಿಸುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಆದರೂ ಜನರ ಸೇವೆಗೆ ನಿಯುಕ್ತರಾಗಿರುವ ಸಂಸದರು ಜನಪ್ರತಿನಿಧಿಗಳು ಪರಸ್ಪರ ಕೆಸರೆರಚುತ್ತಾ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯುವ ಹೋರಾಟವನ್ನು ಪ್ರಾಮಾಣಿಕತೆಯಿಂದ ಮಾಡದೆ ಜನರನ್ನು ಚಿತೆಯೆಡೆಗೆ ದಾರಿತೋರುವ ಬ್ಯಾನರ್‌ಗಳನ್ನು ಹಾಕುತ್ತಾ ವಿಕೃತಿ ಮೆರೆಯುತ್ತಿದ್ದಾರೆ.

ಆಕ್ಸಿಜನ್‌ಗಳ ಪೂರೈಕೆಗಾಗಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬೇಕಾದ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ. ತಮ್ಮ ರಕ್ಷಣೆಗಾಗಿ ಸರಕಾರವನ್ನು ಸ್ಥಾಪಿಸಿದ ಸಾಮಾನ್ಯ ಜನರು ತಮ್ಮ ಹಿತವನ್ನು ಕಾಯದ ಸರ್ಕಾರಗಳಿಗೆ ಕೊಲೆಗಡುಕರೆನ್ನುತ್ತಾ ಹಿಡಿಶಾಪವನ್ನು ಹಾಕುತ್ತಿದ್ದಾರೆ. ಇನ್ನು ವೈದ್ಯರು ಆರೋಗ್ಯ ಸಿಬ್ಬಂಧಿಗಳ ಪಾಡು ಕೇಳುವವರೇ ಇಲ್ಲದಂತಾಗಿದೆ. ನಿದ್ದೆಗೆಟ್ಟು ರಾತ್ರಿಹಗಲೆನ್ನದೆ ತನ್ನ ಕುಟುಂಬದ ಮುಖವನ್ನೇ ನೋಡದೆ ವೈದ್ಯರು ಕೊರೋನದ ವಿರುಧ್ಧ ಹೋರಾಡುತ್ತಲೇ ಯುಧ್ಧಭೂಮಿಯಲ್ಲೇ ಸಾಯುತ್ತಿದ್ದಾರೆ.
ಜನರ ಹಣವನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಸರ್ಕಾರಗಳು ಈ ತುರ್ತು ಸನ್ನಿವೇಶದಲ್ಲೂ ಸಮರ್ಪಕವಾದ ರೀತಿಯಲ್ಲಿ ಜನರಿಗಾಗಿ ವಿನಿಯೋಗಿಸದೆ ತನ್ನ ಕಿಸೆಯಿಂದ ಕೊಡುತ್ತಿದ್ದಾರೋ ಎಂಬಂತೆ ವರ್ತಿಸುತ್ತಿದ್ದಾರೆ. ಅತ್ತಕಡೆ ಕೇಂದ್ರವು ಸೆಂಟ್ರಲ್ ವಿಸ್ತಾ ಯೋಜನೆಯೆಂಬ ಪ್ರಧಾನಿಯ 13000 ಕೋ.ರೂಪಾಯಿಯ ಕನಸಿನ ಮನೆಯನ್ನು ಜನರ ಹೆಣಗಳ ಮೇಲೆ ಕಟ್ಟಲು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಒಂದಂತೂ ಸತ್ಯ. ಓಟಿಗಾಗಿ ಮಾತ್ರವೇ ಜನರನ್ನು ಬಳಸುವ ಮತ್ತು ನೈತಿಕವಾಗಿ ಜನರು ಆರಿಸದ ಅನೈತಿಕ ಸರ್ಕಾರಗಳಿಂದ ಜನರ ಸೇವೆಯನ್ನು ಊಹಿಸಲು ಯಾವ ರೀತಿಯಿಂದಲೂ ಸಾಧ್ಯವಿಲ್ಲ ಅನ್ನುವುದು ಜಗಜ್ಜಾಹಿರಾಗಿದೆ. ಯಾಕೆಂದರೆ ಬೇಡಿಕೆಗಳನ್ನು ಹೇಳುವ ಆಸ್ಪತ್ರೆಗಳಿಗೂ ಎಫ್.ಐ.ಆರ್ ಹಾಕುವ ಭಂಡರಿಂದ ಏನನ್ನೂ ನಿರೀಕ್ಷಿಸಲೂ ಸಾಧ್ಯವಿಲ್ಲ. ಜನರ ಪ್ರಾಣ ಜನರಲ್ಲಷ್ಟೇ ಭದ್ರವಾಗಿರುತ್ತದೆ ಅನ್ನುವುದನ್ನು ಮನಗಂಡು ಸಾರ್ವಜನಿಕರು ಜಾಗೃತಿ ಪಾಲಿಸಬೇಕಾಗಿದೆ.

Previous articleನಮ್ಮ ಸುರಕ್ಷತೆಗೆ ಮನೆಯೇ ಮದ್ದು.
Next articleಝಮಾನ್ ಬಾಯ್ಸ್ ಕಲ್ಲಡ್ಕ ಯು ಎ ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಬದ್ರಿಯಾ ಫ್ರೆಂಡ್ಸ್ ದುಬೈ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರ

LEAVE A REPLY

Please enter your comment!
Please enter your name here