📝 ರಾಮಚಂದ್ರ ಹುದುಗೂರು
ತನ್ನ ಪತಿಯನ್ನು ಬಾಂಬುಗಳಿಂದ ಕೊಂದು ಮಾಂಸದ ಮುದ್ದೆಗಳನ್ನು ಹಸ್ತಾಂತರಿಸಿದ ಹಂತಕರನ್ನು ಕ್ಷಮೆಯಾಚನೆ ಮಾಡಿದ ಕ್ಷಮಯಾಧರಿತ್ರಿ ಶ್ರೀಮತಿ ಸೋನಿಯಾ ರಾಜೀವ್ ಗಾಂಧಿ
ಅಂತಹ ಮಾನವ ವ್ಯಕ್ತಿತ್ವ ವುಳ್ಳ ಸ್ತ್ರೀ ಯನ್ನು ಈ ದೇಶದಲ್ಲಿ ಹಿಂದೆಂದಿಗಿಂತಲೂ ಕೆಟ್ಟದಾಗಿ ಮಾತನಾಡಿ ಕೊಳ್ಳುತ್ತಿರುವುದು ಇದು ಇವರಿಗೆ ಹೊಸದಲ್ಲ,
ನಿಮ್ಮ ಕಾಲ್ಪನಿಕ ರಾಮಾಯಣ, ಮಹಾಭಾರತ, ಶ್ರೀ ಕೃಷ್ಣ ಲೀಲಾ, ವಿಷ್ಣು ಪುರಾಣಗಳು, ಮನು ಸ್ಮೃತಿ ಕಥೆಗಳಲ್ಲಿ ನಿಮಗೆ ಅನುಕೂಲವಾಗುವಂತೆ
ಮಹಿಳೆಯರಿಂದ ಬರೆಯಲ್ಪಟ್ಟಿದೆ,ಮಹಿಳೆಯನ್ನು ಕೀಳಾಗಿ ಕಾಣುವುದು, ನೋಡುವುದು, ಬರೆಯುವುದು, ಆಟವಾಡುವುದು ನಿಮ್ಮ ರಕ್ತ ಲಕ್ಷಣವಲ್ಲವೇ?
ಮಹಿಳೆಯ ನೈತಿಕತೆಯನ್ನು ಪ್ರಶ್ನಿಸುವ ನೀವು ತಾಯಿಯ ಗರ್ಭದಿಂದಲೇ ಅಕ್ಷರಗಳಿಂದ ಮತ್ತು ಫೋಟೋ ಶಾಪ್ ಮುಖಾಂತರ ಸ್ತ್ರೀ ಚಾರಿತ್ರ್ಯ ವಧೆ ಮಾಡಲು ಕಲಿತಿರುವ ಸಂತತಿ ನಿಮ್ಮದಲ್ಲವೇ !
ಆಕೆಯನ್ನು ಬಾರ್ಗರ್ಲ್ ಆಗಿ ಮಾಡಿ ನೃತ್ಯ ಮಾಡಿಸಿದ್ದಾಯಿತು, ಹಾಲಿವುಡ್ ಹೀರೋಗಳ ಜೊತೆಗೆ ನಿಲ್ಲಿಸಿದ್ದಾಯಿತು, ಇತರ ರಾಷ್ಟ್ರಗಳ ನಾಯಕರ ಜೊತೆಗೆ ತೊಡೆಗಳ ಮೇಲೂ ಕುಳಿತು ಕೊಳ್ಳುವಂತೆ ಮಾಡಿದ್ದೀರಿ !
ನಿಮ್ಮ ಪುರುಷತ್ವವು ಈ ಮಹಿಳೆಯನ್ನು ರಾಜಕೀಯವಾಗಿ ಎದುರಿಸಲಾಗದೆ ಸ್ತ್ರೀ ವ್ಯಕ್ತಿತ್ವ ವನ್ನು ಹರಣ ಮಾಡಿದಾಗ ನಿಮ್ಮ ಸುತ್ತಲೂ ಇರುವ ನಿಮಗೆ ಜನ್ಮ ನೀಡಿದ, ನೀವು ಜನ್ಮ ನೀಡಿದ, ನಿಮ್ಮ ಜೊತೆಗಾತಿ, ನೀವು ಒಟ್ಟಿಗೆ ಓಡಾಡಿದ ಗೆಳತಿಯರು ಸ್ತ್ರೀಯರು ಅಲ್ಲವೇ ?
ನಿಮ್ಮ ದೈವತ್ವ, ನಿಮ್ಮ ಧರ್ಮ, ನಿಮ್ಮ ಸಂಸ್ಕೃತಿ, ನಿಮ್ಮ ಶಿಕ್ಷಣ ನಿಮಗೆ ನೆನಪು ಬರಲಿಲ್ಲವೇ ?
ವ್ಯಕ್ತಿತ್ವ ಹರಣ ಮಾಡುವ ಬದಲು ತನ್ನ
ಚಿಕ್ಕಮ್ಮ ಎಂದು ಭಾವಿಸಿದ್ದ ಇಂದಿರಾ ಗಾಂಧಿಯಂತೆ ಕೊಲ್ಲುವುದು ಉತ್ತಮ ಅಲ್ಲವೇ?
ಆಕೆ ಗಂಡನನ್ನು ನಂಬಿ ತನ್ನ ದೇಶ ತೊರೆದು ನಮ್ಮ ದೇಶಕ್ಕೆ ಬಂದವರು.
ಆತನು ತೋರಿಸುವ ಅರ್ಧದಷ್ಟು ಪ್ರೀತಿ ಯಾದರೂ ತನ್ನ ತವರು ಮನೆಯವರು ತೋರಿಸುತ್ತಿದ್ದಾರೆಂದು ಕೊಂಡಿದ್ದಳು. ತನ್ನ ಕುಟುಂಬದ ಒಬ್ಬಬ್ಬರನ್ನೇ ಕಳೆದು ಕೊಂಡು ಕೊನೆಯಲ್ಲಿ ಗಂಡನನ್ನೂ ಸಹ, ಇಬ್ಬರು ದಾಪು ಗಾಲಿಡುವ ಮಕ್ಕಳನ್ನು ಮಾತ್ರ ಉಳಿಸಿಕೊಂಡು ಮಕ್ಕಳೊಂದಿಗೆ ಉಳಿದೆ.
ಪರಕೀಯರಿಂದ ಸ್ವಾತಂತ್ರ್ಯ ಪಡೆದ ದೇಶದ
ಒಂದು ಪಕ್ಷ ಶತಮಾನದ ಇತಿಸ ವುಳ್ಳ ರಾಜಕೀಯ ಪಕ್ಷದ ನಾಯಕರೆಲ್ಲಾ ನನ್ನನ್ನು ಒತ್ತಾಯ ಮಾಡಿದರು.
ಕೇವಲ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದ ನಂತರ ರಾಜಕೀಯಕ್ಕೆ ಬಂದದ್ದು.
ಅದೇನೇ ಇದ್ದರೂ, ಈ ದೇಶದ ಅಧಿಕಾರ ಎರಡು ಸಲ ತನ್ನ ಕಾಲ ಬದಿ ಬಂದರು ಪರಂಪರೆಯ ನ್ಯಾಯಸಮ್ಮತೆ ಇಂದ ನಿಧಾನವಾಗಿ ತಿರಸ್ಕರಿಸಿದವರು. ಅವರು ಯಾವಾಗಲೂ ತಮ್ಮ ಕುಟುಂಬದ ನೈತಿಕ ಜವಾಬ್ದಾರಿಯಂತೆ ರಾಷ್ಟ್ರಕ್ಕಾಗಿಯು ನಿಂತಿದ್ದಾರೆ.
ಇದು ರಾಷ್ಟ್ರ, ಧರ್ಮ, ಜಾತಿ ಮತ್ತು ಪ್ರದೇಶಗಳಿಂದ ಹರಿದು ಹೋಗದಂತೆ ಕಾಪಾಡಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಆಕೆಯ ಶೀಲದ ಮೇಲೆ ಮಾಡದ ಯಾವುದೇ ದಾಳಿ ಇಲ್ಲ.
ವಾಸ್ತವವಾಗಿ ಆಕೆ ನಮ್ಮಂತೆ ಸ್ವಲ್ಪ ಸ್ವಾರ್ಥಿ ಎಂದು ಭಾವಿಸಿದ್ದರೆ ಇಂದು ಹಾಯಾಗಿರ ಬಹುದಿತ್ತು!
ತುಂಬು ಯೌವನದ ಅವಧಿಯಲ್ಲಿ ಈ ನೆಲದ ಮೇಲೆ ಕಾಲಿಟ್ಟವರು, ಈ ಮಣ್ಣಿನ ಅನುಭವಗಳನ್ನು ಅರಿತ ನಂತರವೂ ಇಲ್ಲಿ ಆಕೆಯ ಮೇಲೆ ವಿಷ ಸರ್ಪ ಗಳಂತೆ ಮಿಗಿಬಿದ್ದರು ನಾವು ಮಾತಾಡಲಿಲ್ಲ ಎಂದರೆ ಹೇಗೆ?
ಭೂಮಿಯ ಮೇಲಿನ ಅತ್ಯಂತ ದೊಡ್ಡ ಮಾನವೀಯ ಮೌಲ್ಯಗಳುಳ್ಳ ಕ್ಷಮೆಯಾಧರಿಗಳೆಂದರೆ, ಬುದ್ಧನ ಹುಟ್ಟಿದ ಈ ನೆಲದ ಅತ್ಯುನ್ನತ ಅನುಗ್ರಹವನ್ನು ಹೊಂದಿರುವ ಇಬ್ಬರು ಸ್ತ್ರೀ ಮೂರ್ತಿಗಳು.
ಗ್ಲಾಡಿಸ್ಸ್ಟೈನ್ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ತನ್ನ ಸಂಗಾತಿಯನ್ನು ಬೆಂಕಿಯ ಜ್ವಾಲೆಗೆಸೆದ ದೋಷಿಗಳಿಗೆ ಕ್ಷಮೆ ನೀಡಿದ ಮಹಾನ್ ಕ್ಷಮೆಯಾಧರಿತ್ರಿ ಒಂದು ಸ್ತ್ರೀ ಎಂಬುದು ಮರೆಯಬಾರದು.
ಮತ್ತೊಬ್ಬರು ದಯಾಮಯ ಸ್ತ್ರೀ ಸೋನಿಯಾ.
ತನ್ನ ಗಂಡನನ್ನು ಬಾಂಬುಗಳಿಂದ ಕೊಂದು ಮಾಂಸದ ಮುದ್ದೆಗಳನ್ನು ಹಸ್ತಾಂತರಿಸಿದ ಹಂತಕರಿಗೂ ಕ್ಷಮೆ ನೀಡಿದ ಹೃದಯವಂತೆ ಇವರದು.
ನೀವು ವಿದೇಶಿ ಅಂತ ಕರೆಯುವುದು ನಿಜವೇ!
ಆಕೆ ವಿದೇಶಿ ಮಹಿಳೆ.
ನಮ್ಮ ಶ್ರೀರಾಮನ ವರಿಸಿದ ಸೀತಮ್ಮ ನವರದು ಯಾವದೇಶ ?
ವಿದೇಹ ಸಾಮ್ರಾಜ್ಯದ ಮಿಥಿಲಾ ಪ್ರದೇಶವು ಇಂದಿನ ನೇಪಾಳ ದೇಶವಾಗಿದೆ (ಆ ದೇಶದ ಪೂರ್ವ ಮಧ್ಯಪ್ರದೇಶದ ಅಧೀನದಲ್ಲಿರುವ ಎರಡನೇ ಪ್ರಾಂತ್ಯ
ಜನಕಪುರಿ ಜನ್ಮಸ್ಥಳ) ಅಲ್ಲವೆ!
ಸೀತಾ ಮಾತೆ ನಿಮ್ಮ ದೇವತೆ ಆದಾಗ
ಸೋನಿಯಾ ಮಾತೆ ನಿಮ್ಮ ಭಾವನೆಗಳಲ್ಲಾದರೂ ಮಹಿಳೆ ಆಗಲು ಸಾಧ್ಯವಿಲ್ಲ ಅನ್ನುತ್ತೀರ!
ಹೇಳಲು ನಾಚಿಕೆಯಾಗುತ್ತದೆ,
ಈಕೆಯನ್ನು ದ್ವೇಷಿಸದಿದ್ದರೂ, ಏಕೆ ಆಕೆಯನ್ನು
ಪ್ರೀತಿಸಲು ಸಾಧ್ಯವಾಗಲಿಲ್ಲ.