ಝಮಾನ್ ಬಾಯ್ಸ್ ಕಲ್ಲಡ್ಕ ಯು ಎ ಇ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಬದ್ರಿಯಾ ಫ್ರೆಂಡ್ಸ್ ದುಬೈ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಯಶಸ್ವಿಯಾಗಿ ನಡೆಯಿತು
ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಆಗಮಿಸಿದ್ದು ಮತ್ತು ಹಲವಾರು ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ...
📝 ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು
ನಮ್ಮ ದೇಶದಲ್ಲಿ ಆಕ್ಸಿಜನ್‌ಗಾಗಿ ಹಾಹಾಕಾರ ಎದ್ದಿದೆ. ನಿಮಗಿಷ್ಟು ಅವರಿಗಿಷ್ಟು ಅನ್ನುವಂತೆ ಬೇಡಿಕೆಗಳನ್ನು ಪರಿಗಣಿಸದೇ ಹಂಚುವ ಕ್ರೂರತೆಯೂ ಮುಗಿಲುಮುಟ್ಟಿದೆ. ಅದರೆಡೆಯಲ್ಲಿ ಬೆಡ್‌ಗಳಿಗಾಗಿ ಲಾಬಿ ನಡೆಸುವ ಭ್ರಷ್ಟಾಚಾರದ ಅತಿದೊಡ್ಡ ಕೊಂಪೆಯು ಕೂಡಾ ರಾಡಿಯೆಬ್ಬಿಸಿದೆ. ತನ್ನವರು ಅತಿ ಕ್ರೂರವಾಗಿ ಪ್ರಾಣವಾಯುವಿನ ಕೊರತೆಯನ್ನು ಅನುಭವಿಸಿ ವಿಲವಿಲ ಒದ್ದಾಡಿ ಸಾಯುವ ದುರಂತ ಸುದ್ದಿಗಳು ಸಾಲುಸಾಲಾಗಿ ಬರುತ್ತಿವೆ.
ವಿಪರ್ಯಾಸಗಳು...
ಕಂಡು ಕೇಳರಿಯದಷ್ಟು ಭೀಕರವಾಗಿರುವ ಕೊರೋಣಾದ ಎರಡನೇ ಅಲೆಯು ಬಹಳ ವೇಗದಲ್ಲೇ ಹಳ್ಳಿಗಳನ್ನು ಆವರಿಸುತ್ತಿದೆ. ನಿಯಂತ್ರಣವೇ ಸಾಧ್ಯವಾಗದಷ್ಟು ಕಷ್ಟವಾಗಿದೆ. ಇಂತಹ ಸಂದೀಗ್ದ ಪರಿಸ್ಥಿತಿ ಗೊತ್ತಾಗದ ಗ್ರಾಮೀಣ ಭಾಗದ ಜನರ ಮಾಸ್ಕ್ ಇಲ್ಲದ ಅಸುರಕ್ಷತೆಯ ಓಡಾಟವು ನಾವೇ ತೊಂದರೆ ಎಳೆದು ತಂದಂತೆ.ಸಾಧ್ಯವಾದಷ್ಟು ಮನೆಯಲ್ಲೇ ನಿಲ್ಲೋಣ. ಕಷ್ಟವಾಗಬಹುದು ಆದ್ರೆ ಕೊರೊನಾದ ಯಶಸ್ವೀ ನಿರ್ಮೂಲನೆಗೆ ಇದು ಅವಶ್ಯವಾಗಿದೆ.
ಸಾದಿಕ್ ಕೆ ಇ...
ಭಾರತ ದೇಶದಲ್ಲಿ ಕೋವಿಡ್ ಅಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ,ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ಕೊರೋಣದ ಎರಡೇ ಹಂತ ಜನರಲ್ಲಿ ತೀವ್ರತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತಂದ ಹೊಸ ನಿಯಮ, ಮಾರ್ಗಸೂಚಿ,ಲಾಕ್ ಡೌನ್ ಗಳಿಗೆ ಜನಸಾಮಾನ್ಯರ ಸಹಕಾರ ಮುಖ್ಯವಾಗಿದೆ. ಅದು ಇನ್ನಷ್ಟು ಮುಂದುವರಿದು ಜಾಗರೂಕರಾಗೋಣ.
✒️ ಶಾಹುಲ್ ಹಮೀದ್ ಪೈಝಿ ಮಾಡನ್ನೂರ್ (ಯುವ ಗಾಯಕ)
ಕೋರೋಣ ಎಂಬ ಮಹಾಮಾರಿಯ ಎರಡನೇ ಅಲೆ ಆರ್ಭಟಿಸುತ್ತಿದೆ. ಸಾಧ್ಯವಾದಷ್ಟು ಮನೆಯಲ್ಲಿಯೇ ಜಾಗರೂಕತೆಯಿಂದ ಇರಿ. ಅನಗತ್ಯವಾಗಿ ಹೊರಗಡೆ ತಿರುಗಾಡಬೇಡಿ. ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ನಿಯಮ, ಅದನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ನಮ್ಮ ಊರನ್ನು ಸ್ವಯಂ ರಕ್ಷಿಸೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಅಬುಸಾಲಿ.ಎಸ್.ಎ
✍️ ರಮ್ಲತ್. ಎ
ನವಮಾಸ ಒಡಲಲಿ ಹೊತ್ತುಈ ಜಗಕೆ ಪರಿಚಯಿಸುವಳುರಕ್ತ ಸ್ರಾವದಿ ನೋವನು ಸಹಿಸುತಕಂದನ ಮೊಗವ ನೋಡುತಆನಂದ ಪಡುವಳು.
ಮಗು ಅಳುವಾಗಲೆಲ್ಲತನ್ನ ನೋವನು ಕಡೆಗಣಿಸಿತನ್ನದೇ ರಾಗದಿ ಹಾಡುತಮಗುವನು ಸಂತೈಸುವಳು
ಮಗುವು ಮೊದಲ ಹೆಜ್ಜೆಯನುಇಡುವಾಗ ಎಡವಿಬೀಳದಿರಲೆಂದುಜಾಗರೂಕತೆಯ ವಹಿಸುವಳು
ಪ್ರೀತಿ ಮಮತೆ ಸಹನೆಕರುಣೆಯನು ಉಸಿರಾಗಿಸಿನೋವಿನ ಬವಣೆಯಲ್ಲೂಹೃದಯ ತುಂಬಿ ನಗುವಳು
ಎಷ್ಟೇ ಕಷ್ಟ ಎದುರಾದರೂನೋವನು ಲೆಕ್ಕಿಸದೆಪ್ರೀತಿಯಿಂದ ಮುದ್ದುಮಾಡುತ ಸಾಕಿ ಸಲಹುವಳು
ತನಗಾಗಿ ಏನನ್ನೂ ಬಯಸದೆತನ್ನ ಮಕ್ಕಳ ಭವಿಷ್ಯಕ್ಕಾಗಿಹಗಲಿರುಳು...
ಸೌದಿ ಅರೇಬಿಯಾ : ಜಿದ್ದಾದಲ್ಲಿ ಸುದೀರ್ಘ 31 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆ ಬಜೆಗುಂಡಿ ನಿವಾಸಿ ಮುಸ್ತಫಾ ಎಂಬವರು ದಿನಾಂಕ 29/04/2021 ರ ಗುರುವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮರಣಹೊಂದಿರುತ್ತಾರೆ.
ಜೀವನದಲ್ಲಿನ ಪ್ರತಿಯೊಂದು ವಿಷಯದಲ್ಲೂ ಬಹಳ ಮರ್ಮವರಿತು ಬದುಕು ನಡೆಸಿದ ಉತ್ತಮ ವ್ಯಕ್ತಿತ್ವ. ಉಲಮಾಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಇವರು ಕೊಡುಗೈ ದಾನಿಯೂ...
ಕೊರೋಣ ಎರಡನೇ ಅಲೆಯು ಮೂಲೆಮೂಲೆಗೂ ದಾಳಿಮಾಡುತ್ತಿದೆ. ಆಸ್ಪತ್ರೆಗಳು ಕೊರೋಣ ರೋಗಿಗಳಿಂದ ಬರ್ತಿಯಾಗುತ್ತಿದ್ದರು ಗ್ರಾಮೀಣ ಮಟ್ಟದಲ್ಲಿಯು ಪರಿಸ್ಥಿತಿ ವಿಶಮಿಸುತ್ತಿದೆ. ಸರ್ಕಾರ ಹೇಗೋ ಅಗತ್ಯ ವಸ್ತುಗಳ ಖರೀದಿಗೆಂದು ಸಮಯ ನೀಡಿದ್ದರು ಕೆಲವರು ಇದೆ ನೆಪದಲ್ಲಿ ಬೀದಿ ಸುತ್ತುತ್ತಿದೆ.ಇದರ ಆಪತ್ತು ಮುಂದೆ ಅವಶ್ಯವಿದ್ದವರಿಗೂ ತಡೆ ನೀಡಬಲ್ಲದು. ಆದ್ದರಿಂದ ಅನಾವಶ್ಯಕ ತಿರುಗಾಟ ನಿಲ್ಲಿಸಿ ನಮ್ಮ ಸುರಕ್ಷೇಗೆ ನಾವೇ ಗ್ರಹ ಬಂದನಕ್ಕೆ...
ದೇಶಾದ್ಯಾ0ತ ನಗರಪ್ರದೇಶದಲ್ಲಿ ಕಾಣಿಸಿಕೊಂಡ ಕೊರೋಣದ ಎರಡನೇ ಅಲೆಯು ಗ್ರಾಮೀಣ ಪ್ರದೇಶಕ್ಕೂ ಇದೀಗ ವಕ್ಕರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ನಿಯಂತ್ರಕರೋ ಆರಕ್ಷಕರೋ ಆಗಮಿಸಲ್ಲ ಅಂತ ಎನ್ನುವ ಭ್ರಮೆಯಲ್ಲಿನ ಅಜಾಗರೋಕತೆಯ ಸುತ್ತಾಟವು ನಾವೇ ತೊಂದರೆ ಎಳೆದು ತಂದಂತೆ.ಈಗಾಗಲೇ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿರುವ ಗಂಟಲು ಸ್ರವ ಪರೀಕ್ಷೆ -ಕೊವ್ಯಾಕ್ಸಿನ್ ಅಭಿಯಾನದಲ್ಲಿ ಬಾಗಿಯಾಗುದರ ಮೂಲಕ ಗ್ರಾಮೀಣ ಭಾಗದಲ್ಲಿಯೂ ಕೊರೊನವನ್ನು ಹಿಮೆಟ್ಟಿಸಬಹುದು.ಜಾಮಲ್ .(ಶೀನ್...
ಕೊರೋಣ ಎರಡನೇ ಅಲೆಯು ದೇಶದಲ್ಲಿ ರುದ್ರ ತಂಡವ ಆಡುತ್ತಿರುವ ಈ ಸಂದರ್ಭ ನಮ್ಮಲ್ಲಿ ಹೇಗೆ ಸಾಧ್ಯವೋ ಅಷ್ಟೂ ಜಾಗರೋಕಾರಾಗಿರುವ. ಗ್ರಾಮೀಣ ಮಟ್ಟದಲ್ಲಿ ಇನ್ನೂ ಜನರಿಗೆ ಇದರ ತೀವ್ರತೆ ಏನು ಎಂಬುದು ಗೊತ್ತಿಲ್ಲವೆಂಬಂತಿದೆ. ಕೇವಲ ವೈದ್ಯಕೀಯ ಸಮುದಾಯದಿಂದವೋ ಅಥವಾ ಇನ್ನಿತರ ಮಹಾನಗರಗಳ ಜನರ ಜಗರೋಕತೆಯಿಂದ ಮಾತ್ರವಲ್ಲ ದೇಶದ ಸಾಮೋಹಿಕ ಜನರ ಬದ್ಧತೆಯಿಂದ ಕೊರೋಣ ನಿರ್ಮೂಲನೆ ಸಾಧ್ಯ....