Home ಗಲ್ಫ್ ಫೋಕಸ್ SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈಯಲ್ಲಿ ಜೀಲಾನಿ, ಅಗಲಿದ...

SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈಯಲ್ಲಿ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ

ದುಬೈ: SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಶೈಖ್ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ದಿನಾಂಕ 22 ನವೆಂಬರ್ 2021 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ದುಬೈ ಓರಿಯೆಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರ ನೇತೃತ್ವದಲ್ಲಿ, ಅನುಸ್ಮರನೆ ಮಜ್ಲಿಸ್ ಮತ್ತು ದುವಾದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು, SKSSF ಕರ್ನಾಟಕ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಅವರು ನೆರೆದವರನ್ನು ಕಾರ್ಯಕ್ರಮಕ್ಕೆ ಬರಮಾಡಿದರು. SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರು ಮಾತನಾಡಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--

ಕಾರ್ಯಕ್ರಮದ ಕೇಂದ್ರ ಬಿಂದು, ಮುಖ್ಯ ಪ್ರಭಾಷಕರಾದ ಉಸ್ತಾದ್ ಅಬ್ದುಲ್ ಸಮದ್ ಪೂಕಟೂರು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶೈಖ್ ಜೀಲಾನಿ, ಅಗಲಿದ ಸಮಸ್ತ ನೇತಾರರ ಜೀವನ ಶೈಲಿ, ಆದರ್ಶಗಳು ಮತ್ತು ಸಾಮಾಜಿಕ ಸೇವೆ, ಸಾಂತ್ವನ ಕೆಲಸಗಳ ಅಗತ್ಯತೆ, ಜವಾಬ್ದಾರಿಗಳ ಮತ್ತು ಅದರಿಂದ ಸಿಗುವ ಪ್ರತಿಫಲಗಳ ಬಗ್ಗೆ ಮನ ಮುಟ್ಟುವಂತೆ ಮುಖ್ಯ ಪ್ರಭಾಷಣಗೃದರು.

ಕಾರ್ಯಕ್ರಮದಲ್ಲಿ ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಉಸ್ತಾದ್ ಅಬ್ದುಲ್ ಸಮದ್ ಪೂಕಟೂರು ಅವರನ್ನು ಶಾಲು ಹೊದಿಸಿ ಗೌರವಿಸಿ ಸಮಿತಿಯ ನೇತಾರರು ಸನ್ಮಾನಿಸಿದರು

ಕಾರ್ಯಕ್ರಮದಲ್ಲಿ ಅನಿವಾಸಿ ಸಾಮಾಜಿಕ ನೇತಾರ, ಸೌದಿ ಉದ್ಯಮಿ ಜನಾಬ್ ಇಕ್ಬಾಲ್ ಪರ್ಲಡ್ಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಯುಎಇ ಸಮಸ್ತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಜನಾಬ್ ಅಶ್ರಫ್ ಶಾ ಮಾಂತೂರು, ಜನಾಬ್ ಶಂಸುದ್ದೀನ್ ಸೂರಲ್ಪಾಡಿ,ಜನಾಬ್ ಬದ್ರುದ್ದೀನ್ ಹೆಂತಾರ್,ಜನಾಬ್ ಅಬ್ದುಲ್ ಸಲಾಂ ಬಪ್ಪಲಿಗೆ, ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಜನಾಬ್ ಶೆರೀಫ್ ಕಾವು, ಜನಾಬ್ ಅಶ್ರಫ್ ಆರ್ತಿಕೆರೆ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

SKSSF ಕರ್ನಾಟಕ ಯುಎಇ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಹುಸೈನ್ ಫೈಝಿ ಉಸ್ತಾದ್ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು.

Previous articleSKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈಯಲ್ಲಿ ಬೃಹತ್ ರಕ್ತದಾನ ಶಿಬಿರ
Next articleಅನಿವಾಸಿ ಕನ್ನಡಿಗರ ಒಕ್ಕೂಟ ಯು ಎ ಇ ಇದರ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರ

LEAVE A REPLY

Please enter your comment!
Please enter your name here