ದುಬೈ : SKSSF ವಿಖಾಯ ಕರ್ನಾಟಕ ಯುಎಇ ಸಮಿತಿ ಅಧೀನದಲ್ಲಿ ನಡೆಸಿಕೊಂಡು ಬರುತ್ತಿರುವ ಸ್ಪೂರ್ತಿದಾಯಕ ಪಯಣ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ದುಬೈಯಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು 2022 ಸೆಪ್ಟೆಂಬರ್ 18 ರಂದು ನಡೆಯಲಿರುವುದು ಎಂದು ಎಸ್ ಕೆ ಎಸ್ ಎಸ್ ಎಫ್ ವಿಖಾಯ ಛೇರ್ಮನ್ ಘೋಷಿಸಿದರು. ಈ ಪ್ರಯುಕ್ತ ಕಾರ್ಯಕ್ರಮದ ಆಯೋಜನೆ ರೂಪು ರೇಷಗಳಿಗಾಗಿ ಪೂರ್ವ ಸಿದ್ದತಾ ಸಭೆಯು ನವಾಝ್ ಬಿಸಿ ರೋಡ್ ರವರ ಅದ್ಯಕ್ಶತೆಯಲ್ಲಿ ದೇರಾ ವೇವ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಉಸ್ತಾದ್ ಹಸನ್ ಫೈಝಿ ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಅಝರ್ ಹಂಡೇಲ್ ರವರು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ, ಹಾಗೂ ವಿಖಾಯ ನಡೆದು ಬಂದ ಹಾದಿಯ ಕುರಿತು ವಿಶ್ಲೇಷಿಸಿದರು.
ಕರ್ನಾಟಕ ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಲಿ ತಂಙಲ್ ಕೋಲ್ಪೆ ರವರು ಉದ್ಘಾಟಿಸಿ ಮಾತನಾಡುತ್ತಾ, ಕಳೆದ ಕೆಲವು ವರ್ಷಗಳಿಂದ ವಿಖಾಯ ತಂಡವು ಯು ಎ ಇ ಯಲ್ಲಿ ಹಲವಾರು ಸಮಾಜ ಮುಖಿ ಕಾರ್ಯಗಳೊಂದಿಗೆ ಪ್ರಚಲಿತದಲ್ಲಿದ್ದು, ಹಲವು ಕುಟುಂಬಗಳ ಕಣ್ಣೀರ ಒರೆಸುವ ಕಾರ್ಯವನ್ನು ಬಂದಿದೆ. ಅದರಲ್ಲೂ ಕಳೆದ ಕೋರೋಣ ಸಂಧರ್ಭದಲ್ಲಿ ವಿಖಾಯ ನೀಡಿದ ಸೇವೆಯನ್ನು ಶ್ಲಾಘಿಸಿದ ಅವರು, ಕಳೆದು ಎರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸ್ಪೂರ್ತಿದಾಯಕ ಪಯಣ ಕಾಯಕ್ರಮದ ವಾರ್ಷಿಕ ಸಮಾರಂಭವು ಸೆಪ್ಟೆಂಬರ್ ತಿಂಗಳ 18 ರಂದು ನಡೆಯಲಿದ್ದು ತಾವೆಲ್ಲರೂ ಉತ್ತಮ ರೀತಿಯಲ್ಲಿ ಸಹಕರಿಸುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಖಾಯ ಛೇರ್ಮನ್ ನವಾಝ್ ಬಿಸಿ ರೋಡ್ ರವರು ಮಾತನಾಡುತ್ತಾ, ವಿಖಾಯ ತಂಡದ ಪ್ರತಿಯೋರ್ವರ ಸಹಕಾರವನ್ನು ಸ್ಮರಿಸಿಕೊಂಡು , ನಮ್ಮಲ್ಲಿ ಮುಂದೆ ಹಲವಾರು ಗುರಿಗಳಿದ್ದು , ತನಮ್ಮಿಂದ ಈ ಸಮುದಾಯಕ್ಕೆ ಸಮಾಜಕ್ಕೆ ನಾಳಿನ ಯುವ ಪೀಳಿಗೆಗೆ ಮಾದರಿಯಾಗಿ ಕಾರ್ಯವನ್ನು ನಿರ್ವಹಿಸಲು ಎಲ್ಲರೂ ಮುಂದೆ ಬರಬೇಕಾಗಿ ವಿನಂತಿಸಿಕೊಂಡು, ವಿಖಾಯ ತಂಡವು ನಡೆಸಿಕೊಂಡು ಬರುತ್ತಿರುವ ಸ್ಪೂರ್ತಿದಾಯಕ ಪಯಣ ಕಾರ್ಯಕ್ರಮವು ಕಳೆದ ಇಪ್ಪತ್ತಮೂರು ಆವೃತ್ತಿಗಳನ್ನು ಕೇರಳ ಹಾಗೂ ಕರ್ನಾಟಕದ ಸಮಸ್ತದ ಪ್ರಮುಖ ಉನ್ನತ ಉಲಮಾ ರಿಂದ ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು, ಮುಂದಿನ ತಿಂಗಳು ಸೆಪ್ಟೆಂಬರ್ 18 ರಂದು ಎರಡು ವರ್ಷಗಳನ್ನು ಪೂರೈಸುತ್ತಿದ್ದು ಅದರ ಪ್ರಯುಕ್ತ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮವನ್ನು ನಡೆಸಲು ಉದ್ದೇಶಿಸಿದ್ದು ಸರ್ವರ ಸಹಕಾರವನ್ನು ಕೋರಿದರು.
ಇದೆ ಸಂಧರ್ಭದಲ್ಲಿ 2022 ಸೆಪ್ಟೆಂಬರ್ 18 ರಂದು ನಡೆಯಲಿರುವ ನೂರೇ ಅಜ್ಮೀರ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು
ಛೇರ್ಮನ್ : ಸಿರಾಜ್ ಬಿಸಿ ರೋಡ್
ಪ್ರಧಾನ ಕಾರ್ಯದರ್ಶಿ : ಅಝರ್ ಹಂಡೇಲ್
ಕೋಶಾಧಿಕಾರಿ : ಅಲಿ ಹೈದರ್ ಈಶ್ವರಮಂಗಿಲ
ಸಲಹಾ ಸಮಿತಿ ಸದಸ್ಯರು : ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ, ಬದ್ರುದ್ದೀನ್ ಹೆಂತಾರ್, ಶರೀಫ್ ಕಾವು, ಹನೀಫ್ ಅರಿಯಮೂಲೆ, ಅಬ್ದುಲ್ ಸಲಾಂ ಬಪ್ಪಲಿಗೆ, ಅಬ್ದುಲ್ಲಾ ನಯೀಮಿ, ಸುಲೈಮಾನ್ ಮೌಲವಿ ಕಲ್ಲೆಗ, ಅಬ್ದುಲ್ ಲತೀಫ್ ಕೌಡಿಚ್ಚಾರ್, ನೂರ್ ಮುಹಮ್ಮದ್ ನೀರ್ಕಜೆ , ಉಸ್ತಾದ್ ಹಸನ್ ಫೈಝಿ ,ಬದುರುಲ್ ಮುನೀರ್ ಫೈಝಿ, ನವಾಝ್ ಬಿಸಿ ರೋಡ್, ನಾಸಿರ್ ಬಪ್ಪಳಿಗೆ ,
ಕೋ ಛೇರ್ಮನ್ : ಇಬ್ರಾಹಿಂ ಆತೂರು, ಅಝೀಝ್ ಸೋಂಪಾಡಿ, ನಿಝಾಮ್ ತೋಡಾರ್,
ಕಾರ್ಯದರ್ಶಿ : ಶಬೀರ್ ಶಕಲೇಸ್ಪುರ, ಜಾಬಿರ್ ಬೆಟ್ಟಂಪಾಡಿ, ಪರ್ವೆಝ್ ಹಳೆಯಂಗಡಿ,
ಪ್ರಚಾರ ಸಮಿತಿ ಸದಸ್ಯರು : ನವಾಝ್ ಕಟ್ಟತ್ತಾರ್, ರಫೀಕ್ ಕೊಡಗು, ಇಶಾಕ್ ಕುಡ್ತಮುಗೇರು, ಜಾಬಿರ್ ಬಪ್ಪಲಿಗೆ, , ಹಾರಿಸ್ ಪಾಪೆತ್ತಡ್ಕ , ಶಾಫಿ ಪೆರುವಾಯಿ, ನಿಯಾಝ್ ಕರಾಯ
ಸಂಚಾಲಕರು : , ಷರೀಫ್ ಕೊಡಿನೀರ್ ,ಇಫ್ತಿಕಾರ್ ಕಣ್ಣೂರು, ಅನ್ವರ್ ಮಾಣಿಲ, ಜಲೀಲ್ ಶಾನ್ ವಿಟ್ಲ , ಶಾಹುಲ್ ಬಿಸಿ ರೋಡ್, ಸೊಹೈಲ್ ಹಳೆಯಂಗಡಿ, ಶಾರೂಖ್ ಬಿಸಿ ರೋಡ್ , ಯಾಹ್ಯಾ ಕೊಡ್ಲಿಪೇಟೆ, ಅಶ್ರಫ್ ಪರ್ಲಡ್ಕ , ಸಫಾ ಇಸ್ಮಾಯಿಲ್ ಬಜ್ಪೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿ ಅಧೀನದಲ್ಲಿ ನಡೆಸುವ ಸೆಪ್ಟೆಂಬರ್ 4 ರಂದು ನಡೆಯುವ ಮರ್ಹೂಂ ರಫೀಕ್ ಆತೂರ್ ರವರ ಸ್ಮರಣಾರ್ಥ ವಿಖಾಯ ಬೃಹತ್ ರಕ್ತದಾನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು .
ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಹೆಂತಾರ್, ಶರೀಫ್ ಕಾವು, ಹನೀಫ್ ಅರಿಯಮೂಲೆ, ಅಬ್ದುಲ್ ಸಲಾಂ ಬಪ್ಪಲಿಗೆ, ಬದುರುಲ್ ಮುನೀರ್ ಫೈಝಿ, ಅಬ್ದುಲ್ಲಾ ನಯೀಮಿ, ಸಿರಾಜ್ ಬಿಸಿ ರೋಡ್, ಇಶಾಕ್ ಕುಡ್ತಮುಗೇರು ಮೊದಲಾದವರು ಮಾತನಾಡಿ ಸಭಾ ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು .
ಶಾರೂಖ್ ಬಿ ಸಿ ರೋಡ್ ರವರು ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ , ಧನ್ಯವಾದ ಸಮರ್ಪಿಸಿದರು ,