ದುಬೈ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ, ಪ್ರಮುಖ ಪಂಡಿತರೂ, ಕರ್ಮ ಶಾಸ್ತ್ರದ ಅಗಾಧ ಪಾಂಡಿತ್ಯ, ಸೂಫಿ ವರ್ಯರೂ ಆದ ಬಹು| ಶೈಖುನಾ ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯರ್ ಉಸ್ತಾದರು ವೃದ್ಯಾಪ ಅನಾರೋಗ್ಯದಿಂದ 28-8-2022 ರಂದು ತನ್ನ ಸ್ವಗ್ರಹದಲ್ಲಿ ನಿಧನರಾದರು ಅವರಿಗೆ ಸುಮಾರು 91 ವಯಸ್ಸಾಗಿತ್ತು.
ಶೈಖುನಾ ಚೇಲಕ್ಕಾಡ್ ಉಸ್ತಾದ್ 2004ರಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಮುಶಾವರ ಅಂಗವಾಗಿದ್ದರು,
ಸಮಸ್ತ ಕೋಝಿಕ್ಕೋಡು ಜಿಲ್ಲಾ ಅಧ್ಯಕ್ಷರಾಗಿದ್ದ ಶೈಖುನ ಉಸ್ತಾದರು,ಚೇಲಕ್ಕಾಡ್ ಕುಳಮ್ಮುಳ್ಳದಲ್ಲಿ ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಕುಂಞಾಮಿ ದಂಪತಿಗಳಿಗೆ ಜನಿಸಿದ ಶೈಖುನಾ ಚೇಲಕ್ಕಾಡ್ ಉಸ್ತಾದ್ ಸಾವಿರಾರು ಶಿಷ್ಯರ ಗುರುವಾಗಿದ್ದಾರೆ.
ವಯನಾಡಿನ ವಾಲಾಟ್ಟ್ ಮಸೀದಿಯಲ್ಲಿ 45ವರ್ಷ ಸೇವೆಸಲ್ಲಿಸಿದ್ದರು, ಅವರ ತಂದೆಯೇ ಚೆಲಕ್ಕಾಡ್ ಉಸ್ತಾದರ ಮೊದಲ ಗುರುವಾಗಿದ್ದರು.
ನಾದಾಪುರಂ,ಚೆಮ್ಮಂಕಡವ್,ಪೋಡಿಯಾಡ್,ಮೇಲ್ಮುರಿ,
ವಾಝಕ್ಕಾಡ್,ಪಾರಕ್ಕಡವ್,ನಲ್ಲಿ ಕಲಿತ ನಂತರ 1962ರಲ್ಲಿ ವೆಲ್ಲೂರಿನ ಭಾಖಿಯಾತ್ ನಲ್ಲಿ ಮೌಲವಿ ಫಾಳಿಲ್ ಭಾಖವಿ ಬಿರುದು ಪಡೆದರು.
ಶೈಖುನಾ ಶಂಸುಲ್ ಉಲಮಾ ನ.ಮ.,ಕಣ್ಣಿಯತ್ ಉಸ್ತಾದರು,ಕುಟ್ಟಿ ಮುಸ್ಲಿಯಾರ್ ಫಳ್ಪರಿ,ಕೀಝಾನ ಕುಂಞಿ ಅಬ್ದುಲ್ಲಾ ಮುಸ್ಲಿಯಾರ್,ಕಾನ್ನಾತ್ ಅಬ್ದುಲ್ಲಾ ಮುಸ್ಲಿಯಾರ್,ಶೈಖ್ ಹಸನ್ ಹಝರತ್,ಶೈಖ್ ಅಬೂಬಕ್ಕರ್ ಹಝರತ್,ಮುಹಮ್ಮದ್ ಶಿರಸಿ ,ಮುಂತಾದ ಮಹಾನರು ಶೈಖುನಾ ಪ್ರಧಾನ ಗುರುಗಳಾಗಿದ್ದರು.
ವೆಲ್ಲೂರು ಬಾಖಿಯಾತ್ ನಲ್ಲಿ ಪದವಿ ಪಡೆದ ನಂತರ ಇವರು ಆಂದೋನಾ,ಕೂವಲ್ಲೂರು,ಇರ್ಗೂರು,ಕಂಡಿಪರಂ,ಚೀಯೂರ್,ಚೇಲಕ್ಕಾಡ್ ಮುಂತಾದ ಕಡೆ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು.
ಪಟ್ಟಿಕ್ಕಾಡ್ ಜಾಮಿಃಯ ನೂರಿಯ್ಯ ದಲ್ಲಿ ಸುಮಾರು 11 ವರ್ಷ,ದಾರುಸ್ಸಲಾಂ ಅರಬಿಕ್ ಕಾಲೇಜಿನಲ್ಲಿ 7ವರ್ಷ,ಸಿ.ಎಮ್. ಮಕಾಮ್ ನಲ್ಲಿ ಆರು ವರ್ಷ,ಅಸ್ಹರಿ ಕಾಲೇಜ್ ಮಡವೂರ್ ನಲ್ಲಿ ತನ್ನ ಸೇವೆ ಸಲ್ಲಿಸಿದ್ದರು.
ಚೇಲಕ್ಕಾಡ್ ಉಸ್ತಾದರು ಸಮುದಾಯಕ್ಕಾಗಿ, ಧಾರ್ಮಿಕ ಶಿಕ್ಷಣ ಸಬಲೀಕರಣಕ್ಕಾಗಿ, ಸಮಸ್ತ ಕೇರಳ ಜಮೀಯತುಲ್ ಉಲೆಮಾ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ತನ್ನ ಸುಧೀರ್ಘ ಜೀವಿತಾವಧಿಯನ್ನು ವ್ಯವಿಸಿದರು
ಬಹುಮಾನ್ಯ ಚೇಲಕ್ಕಾಡ್ ಉಸ್ತಾದ್ ಅವರ ವಿಯೋಗಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರು ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸುವುದರೊಂದಿಗೆ ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.