SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ಅದೀನದಲ್ಲಿ ಯುಎಇ ರಾಷ್ಟ್ರೀಯ ದಿನಾಚರಣೆ ಮತ್ತು ಸ್ಪೂರ್ತಿದಾಯಕ ಪಯಣ ನಾಲ್ಕನೇ ಆವೃತ್ತಿ ದಿನಾಂಕ 4.12.2020 ಶುಕ್ರವಾರ 7ಗಂಟೆಗೆ ಸರಿಯಾಗಿ ಝೂಮ್ ಆನ್ ಲೈನ್ ನಲ್ಲಿ SKSSF ಕರ್ನಾಟಕ ದುಬೈ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ಅಧ್ಯಕ್ಷರಾದ ಸಯ್ಯದ್ ಹುಸೈನ್ ಬಾಅಲವಿ ತಂಙಲ್ ಕುಕ್ಕಾಜೆ ಅವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿಯ ಸದಸ್ಯರಾದ ಜಾಬಿರ್ ಬೆಟ್ಟಂಪಾಡಿ ಅವರು ನೆರೆದವರನ್ನು ಸ್ವಾಗತಿಸಿದರು.
SKSSF ಕರ್ನಾಟಕ ಯುಎಇ ಸಮಿತಿಯ ಉಪಾಧ್ಯಕ್ಷರು, ದಾರುನ್ನೂರ್ ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಅವರು ಮಾತನಾಡಿ ಕೋವಿಡ್ ಕಾಲದಲ್ಲಿ ಜನಸೇವೆಗೈದ ವಿಖಾಯ ಯುಎಇ ಸಮಿತಿಯ ಸದಸ್ಯರ ಸೇವೆಗಳನ್ನು ಪ್ರಶಂಸಿಸಿದರು ಮತ್ತು ನಮ್ಮ ಮುಂದಿರುವ ಜವಾಬ್ದಾರಿಗಳನ್ನು ನೆನಪಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯುಎಇ ವಿದ್ಯಾರ್ಥಿಗಳಾದ ಮಾಸ್ಟರ್ ಸಾಮಿತ್ ಸಮೀರ್ ಇಬ್ರಾಹಿಮ್, ಸಾಬಿರ್ ಸಮೀರ್ ಇಬ್ರಾಹಿಮ್ ಅವರು ರಾಷ್ಟ್ರ ಗೀತೆ ಹಾಡಿದರು. ಮಾಸ್ಟರ್ ಮೊಹಮ್ಮದ್ ಅಝ್ ಫರ್ ರಾಷ್ಟ್ರೀಯ ದಿನಾಚರಣೆ ಭಾಷಣ ಮಾಡಿದರು.
ಕಾರ್ಯಕ್ರಮದ ಮುಖ್ಯ ಪ್ರಭಾಷಕರು, SKSSF ಮನೀಷ ರಾಜ್ಯ ಸಮಿತಿಯ ಅಧ್ಯಕ್ಷರಾದ ಉಸ್ತಾದ್ ಬಷೀರ್ ಫೈಝಿ ದೇಶಮಂಗಳಂ ಅವರು ಸಮಸ್ತ ಉಲಮಾ ಗಳ ಜೀವನ ಯಾತ್ರೆ, ವಿಖಾಯ ಕಾರ್ಯಚಟುವಟಿಗಳು, ಅದರಿಂದ ಕಾರ್ಯಕರ್ತರಿಗೆ ಸಿಗುವ ಪ್ರತಿಫಲ, ಸಮುದಾಯದ ಮೇಲೆ ಬೀರುವ ಉತ್ತಮ ಪರಿಣಾಮಗಳ ಬಗ್ಗೆ ಮನ ಮುಟ್ಟುವಂತೆ ಮಾತನಾಡಿ ಮುಖ್ಯ ಪ್ರಭಾಷಣ ನೆರವೇರಿಸಿದರು ಮತ್ತು ಸಹಕರಿಸಿದ ಎಲ್ಲರಿಗೂ ದುವಾಗೈದರು.
ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರು ಮಾತನಾಡಿ ಇತ್ತೀಚೆಗೆ ನಡೆದ ಬೃಹತ್ ರಕ್ತ ದಾನ ಶಿಬಿರ ಮತ್ತು ವಿಖಾಯ ಕಾರ್ಯಚಟುವಟಿಗಳಿಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರರು.
ವಿಖಾಯ ಕರ್ನಾಟಕ ಯುಎಇ ಸಮಿತಿಯ ಸದಸ್ಯರಾದ ಶಾರುಖ್ ಬಿಸಿ ರೋಡ್ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು. ವಿಖಾಯ ಕರ್ನಾಟಕ ಯುಎಇ ಸಮಿತಿಯ ಸದಸ್ಯರಾದ ಸಿದ್ದೀಕ್ ಸುಳ್ಯ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ SKSSF ಕರ್ನಾಟಕ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ವಿಖಾಯ ಚಯರ್ ಮೇನ್ ನವಾಝ್ ಬಿ ಸಿ ರೋಡ್ ಸೇರಿದಂತೆ SKSSF, ವಿಖಾಯ ಯುಎಇ ಸಮಿತಿಯ ನಾಯಕರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.