Home ಗಲ್ಫ್ ಫೋಕಸ್ ಪಾರ್ಶ್ವವಾಯು ಪೀಡಿತ ರೋಗಿಯನ್ನು ಊರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್.

ಪಾರ್ಶ್ವವಾಯು ಪೀಡಿತ ರೋಗಿಯನ್ನು ಊರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್.

ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದ ತುರೈಫ್ ನ ಕುರಾಯ ಎಂಬಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಸಿದ್ದಕಟ್ಟೆಯ ನಿವಾಸಿಯಾದ ಯಾಕೂಬ್ ಬ್ಯಾರಿ ಎಂಬವರು, ಕೋವಿಡ್-19, ಹಾಗೂ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ರೋಗಿಯ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫಾರಂ ಅನ್ನು ಸಂಪರ್ಕಿಸಿ ರೋಗಿಯ ಬಗ್ಗೆ ಮಾಹಿತಿ ನೀಡಿ, ಊರಿಗೆ ಕಳುಹಿಸಿಕೊಡುವ ಬಗ್ಗೆ ಮನವಿಯನ್ನು ಮಾಡುತ್ತಾರೆ,

ರೋಗಿಯ ಪರಿಸ್ಥಿತಿಯನ್ನು ಮನಗಂಡು ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್ ಘಟಕವು ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಶಬೀರ್ ಕೃಷ್ಣಾಪುರ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ರೋಗಿಯನ್ನು 1800 ಕಿ. ಮೀ ದೂರದಿಂದ ದಮ್ಮಾಮ್ ವಿಮಾನ ನಿಲ್ದಾಣಕ್ಕೆ ಕರೆತರಲು ಆಂಬುಲೆನ್ಸ್ ಗಾಗಿ ಜುಬೈಲ್ ನ ಎಕ್ಸ್ ಪರ್ಟೈಸ್ ಸಂಸ್ಥೆಗೆ ಸಂಪರ್ಕಿಸಿ ಅವರ ಸಹಕಾರದೊಂದಿಗೆ ಹಾಗೂ ಸಮಾಜಸೇವಕರಾದ ಫಾರೂಕ್ portfolio ಇವರ ಸಹಾಯದೊಂದಿಗೆ ರೋಗಿಯನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಊರಿಗೆ ಕಳುಹಿಸಲು ಸಾಧ್ಯವಾಯಿತು.

--ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಒತ್ತಿರಿ--


ಇದೇ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನಾದ ಅಲಿ ರಝಾ ಇವರನ್ನು ಇಂಡಿಯನ್ ಸೋಶಿಯಲ್ ಫಾರಂ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐ. ಎಸ್. ಎಫ್. ಜುಬೈಲ್ ಸಮಾಜ ಸೇವಾ ಘಟಕದ ಉಸ್ತುವಾರಿ ಆಗಿರುವ ಝುಲ್ಕರ್ ಸುರತ್ಕಲ್, ರಾಜ್ಯ ಅಧ್ಯಕ್ಷರಾದ ನಝೀರ್ ತುಂಬೆ, ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಶಬೀರ್ ಕೃಷ್ಣಾಪುರ, ಎಕ್ಸ್ ಪರ್ಟೈಸ್ ಸಂಸ್ಥೆಯ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Previous article“ಪಪ್ಪು” ರಾಹುಲ್ ಗಾಂಧಿಯ ಪ್ರಬುಧ್ಧತೆಯನ್ನು ಬಾಲಿಶಗೊಳಿಸುವ ಹತಾಶೆಯ ಪ್ರಯತ್ನ
Next articleಕೊಕ್ಕಡ ಶಾಲೆಯ ಘಟನೆ ನಾಡಗೀತೆಯ ಅಣಕವಲ್ಲವೇ!!?

LEAVE A REPLY

Please enter your comment!
Please enter your name here