ಸೌದಿ ಅರೇಬಿಯಾ : ಜಿದ್ದಾದಲ್ಲಿ ಸುದೀರ್ಘ 31 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆ ಬಜೆಗುಂಡಿ ನಿವಾಸಿ ಮುಸ್ತಫಾ ಎಂಬವರು ದಿನಾಂಕ 29/04/2021 ರ ಗುರುವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮರಣಹೊಂದಿರುತ್ತಾರೆ.
ಜೀವನದಲ್ಲಿನ ಪ್ರತಿಯೊಂದು ವಿಷಯದಲ್ಲೂ ಬಹಳ ಮರ್ಮವರಿತು ಬದುಕು ನಡೆಸಿದ ಉತ್ತಮ ವ್ಯಕ್ತಿತ್ವ. ಉಲಮಾಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಇವರು ಕೊಡುಗೈ ದಾನಿಯೂ ಕೂಡ. ವಾರಗಳ ಹಿಂದೆಯಷ್ಟೇ ಅನಾರೋಗ್ಯ ಕಾಣಿಸಿಕೊಂಡು ವಾಸಿಸುವ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ.
ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೇ ಸ್ಪಂದಿಸಿ ಕಾರ್ಯ ಪ್ರವೃತ್ತರಾದ SKSSF ಜಿಸಿಸಿ ಕೊಡಗು ಹಾಗೂ ಜಿದ್ದಾ KMCC ವೆಲ್ಫೇರ್ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗೂ ಅಂತ್ಯಕ್ರಿಯೆಗೆ ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಇಂದು ದಿನಾಂಕ 01/05/2021ರ ಶನಿವಾರ ಮಧ್ಯಾಹ್ನ ದ ಒಳಗಾಗಿ ಜಿದ್ದಾ ದಹ್ಬಾನ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು. ವಾರಾಂತ್ಯ ಕಛೇರಿಗಳು ರಜೆಯಾಗಿದ್ದರೂ ಸಹ ಸಂಘಟನೆಯ ನಾಯಕರುಗಳ ನಿರಂತರ ಸಂಪರ್ಕ ಮೂಲಕ ಕೇವಲ ಎರಡು ದಿವಸಗಳೊಳಗೆ ದಾಖಲೆಗಳು ಸರಿಪಡಿಸಲು ಸಾಧ್ಯವಾಯಿತು.
ಈ ಒಂದು ಉತ್ತಮ ಕಾರ್ಯದಲ್ಲಿ ಸಹಕರಿಸಿದ SKSSF ಜಿಸಿಸಿ ಕೊಡಗು ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಜಿದ್ದಾ KMCC ವೆಲ್ಫೇರ್ ಸಮಿತಿಯ ಪದಾಧಿಕಾರಿಗಳಿಗೆ ಸಹಕರಿಸಿದ ಎಲ್ಲರಿಗೂ ಕುಟುಂಬಸ್ಥರು ಆಭಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೃತರ ಗೆಳೆಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿದರು.
ವರದಿ: ಮಾಧ್ಯಮ ವಿಭಾಗ
SKSSF GCC ಕೊಡಗು